ಮಂಡ್ಯ: ಜ.26 ರಿಂದ ಫಲಪುಷ್ಪ ಪ್ರದರ್ಶನ; ವಿದ್ಯಾರ್ಥಿ-ರೈತರಿಗೆ ಉಚಿತ ಪ್ರವೇಶ

Update: 2018-01-24 18:26 GMT

ಮಂಡ್ಯ, ಜ.24: ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ನಬಾರ್ಡ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ತೋಟಗಾರಿಕೆ ಕಛೇರಿ ಆವರಣದಲ್ಲಿ ಜ.26 ರಿಂದ ಫಲಪುಷ್ಟಪ ಪ್ರದರ್ಶನ ಆಯೋಜಿಸಲಾಗಿದೆ..

ಜ.26 ರಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಶಾಸಕ ಅಂಬರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಜ.30ರವರೆಗೆ ಬೆಳಗೆ 9 ರಿಂದ ರಾತ್ರಿ 9ಗಂಟೆಯವರೆಗೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 6 ರಿಂದ ರಾತ್ರಿ  9ರವರೆಗೆ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ವಯಸ್ಕರರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ.ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಶಾಲಾವತಿಯಿಂದ ಬರುವ 1 ರಿಂದ 7ನೆ ತರಗತಿ ವ್ಯಾಸಂಗ ಮಾಡುವ ಶಾಲಾ ಮಕ್ಕಳಿಗೆ ಹಾಗೂ ರೈತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.    

ಹೂಗಳಿಂದ ಅಲಂಕೃತಗೊಳ್ಳುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ, ಮರಳಿನಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡರ ಕಲಾಕೃತಿ, ಶ್ರೀ ರಾಮಾನುಜಚಾರ್ಯರ ಪುತ್ಥಳಿ, ತರಕಾರಿ ಕೆತ್ತನೆ, ಹೂವಿನ ಪಿರಮಿಡ್ ಗಳು, ಬನ್ನೂರು ಕುರಿಗಳ ಪ್ರದರ್ಶನ, ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಾಕ್ಷತೆ ಫಲಪುಷ್ಟಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News