ವಿರಾಜಪೇಟೆ: ತಲೆ ಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ

Update: 2018-01-26 16:29 GMT

ಮಡಿಕೇರಿ, ಜ.26 : ವಿರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಈ ಸಂದರ್ಭ ಧ್ವಜದ ಹಸಿರು ಮೇಲೆಯಾದರೆ ಕೇಸರಿ ಕೆಳಗಾಗಿ ಹಾರಾಡತೊಡಗಿತು. ಧ್ವಜ ವಂದನೆಯನ್ನು ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡಿದ ನಂತರ ಧ್ವಜವನ್ನು ಇಳಿಸಿ ಸರಿಪಡಿಸಲಾಯಿತು. ಸಾರ್ವಜನಿಕರು ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News