×
Ad

ಮೈಸೂರು: ಪ್ರತ್ಯೇಕ ಪ್ರಕರಣ; ಮೂವರು ಕಳ್ಳರ ಬಂಧನ

Update: 2018-01-26 22:39 IST

ಮೈಸೂರು,ಜ.26: ಪ್ರತ್ಯೇಕ ಪ್ರಕರಣದಲ್ಲಿ ಮೂವರು ಕಳ್ಳರನ್ನು ಬಂಧಿಸಿ, 6 ಬೈಕ್, ವಾಟರ್ ಮೀಟರ್ ಹಾಗೂ ನಳ್ಳಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ.ಎನ್. ಪುರದ ಅಜ್ಮಲ್ ಪಾಷ(19) ಹಾಗೂ ಸುಹೇಬ್(19) ಬಂಧಿತ ಆರೋಪಿಗಳು. ಗಾಯತ್ರಿಪುರಂ ಚರ್ಚ್ ರಸ್ತೆಯಲ್ಲಿ ಬರುತ್ತಿದ್ದ ಇವರಿಬ್ಬರನ್ನು ತಡೆದು ವಿಚಾರಣೆಗೆ ಒಳಪಡಿಸಿದಾಗ, ರಾತ್ರಿ ವೇಳೆ ಕಲ್ಯಾಣಗಿರಿ ಮತ್ತು ಇತರೆಡೆಗಳಲ್ಲಿ ಮನೆಗಳ ಹೊರಭಾಗದಲ್ಲಿ ಅಳವಡಿಸಿರುತ್ತಿದ್ದ ವಾಟರ್ ಮೀಟರ್‍ಗಳು ಮತ್ತು ಸ್ಟೀಲ್ ನಲ್ಲಿಗಳನ್ನು ಕಳ್ಳತನ ಮಾಡಿದ್ದು ಹಾಗೂ ಕಲ್ಯಾಣಗಿರಿ ಮತ್ತು ತ್ರಿವೇಣಿ ವೃತ್ತದಿಂದ ಎರಡು ಬೈಕ್‍ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. 

ಬಂಧಿತರಿಂದ ಎರಡು ಬೈಕ್, 40 ಸ್ಟೀಲ್ ನಲ್ಲಿಗಳು ಮತ್ತು 13 ವಾಟರ್ ಮೀಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೈಕ್ ಕಳ್ಳನ ಬಂಧನ : ಉದಯಗಿರಿ ಎಂ.ಜಿ. ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹೋಂಡಾ ಆಕ್ಟಿವಾದಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ, ವಿಚಾರಣೆ ನಡೆಸಿದಾಗ ಬೈಕ್‍ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಗೌಸಿಯಾನಗರದ ನಿವಾಸಿ ಬಾಷಾ ಬೈ(63) ಬಂಧಿತ ಆರೋಪಿ. ಈತನಿಂದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈತನ ವಿರುದ್ಧ ಈ ಹಿಂದೆಯೂ ಕೂಡ ಉದಯಗಿರಿ ಮತ್ತು ದೇವರಾಜ ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News