ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಮೂಲಕ ಸಧೃಢ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಆರ್.ನರೇಂದ್ರ

Update: 2018-01-26 18:13 GMT

ಕೊಳ್ಳೇಗಾಲ,ಜ.26: ಭಾರತೀಯರು ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಸಧೃಢ ಭಾರತ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಹನೂರು ಶಾಸಕ ಆರ್.ನರೇಂದ್ರ ಅವರು ಹೇಳಿದರು.

ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅನೇಕ ರಾಜ್ಯಗಳನ್ನು ಒಗ್ಗೂಡಿಸಿ, 1950 ರಲ್ಲಿ ಸಂವಿಧಾನ ಜಾರಿಯಾದ ದಿನವನ್ನು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲೇ ಅತ್ಯುತ್ತಮವಾದ ಸಂವಿಧಾನ ಕೊಟ್ಟ ಡಾ.ಬಿ.ಆರ್ ಅಂಬೇಡ್ಕರ್‍ರವರನ್ನು ಕೂಡಾ ನಾವು ಸದಾ ನೆನಪಿಡಬೇಕಾಗುತ್ತದೆ ಎಂದರು.

ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇದ್ದರೂ ಕೂಡ ನಾವೆಲ್ಲಾ ಒಂದೇ ಮನೋಭಾವನೆಯೊಂದಿಗೆ ಸಂವಿಧಾನದಡಿಯಲ್ಲಿ ನಡೆಯುತ್ತಿದ್ದೇವೆ. ಸಧೃಢವಾದಂತಹ ಭಾರತ ನಿರ್ಮಾಣವಾಗಬೇಕಾದರೆ ನಾವೆಲ್ಲರೂ ಕೂಡ ದ್ವೇಷ, ಅಸೂಯೆಯನ್ನು ಮರೆತು, ನಾವೆಲ್ಲಾ ಭಾರತಾಂಭೆಯ ಮಕ್ಕಳು ಎಂಬ ಭಾವನೆಯಿಂದ ದುಡಿದಾಗ ಮಾತ್ರ ದೇಶ ಅಭಿವೃದ್ಧಿಹೊಂದಲು ಸಾಧ್ಯವೆಂದು ತಿಳಿಸಿದರು.

ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್, ತಹಶಿಲ್ದಾರ್ ಕಾಮಾಕ್ಷಮ್ಮ, ಡಿವೈಎಸ್‍ಪಿ ಪುಟ್ಟಮಾದಯ್ಯ, ನಗರಸಭೆ ಆಯುಕ್ತ ಡಿ.ಕೆ.ಲಿಂಗರಾಜು, ತಾ.ಪಂ ಇಒ ಡಾ.ಪ್ರಕಾಶ್, ಬಿಒ ಶಿವಲಿಂಗಯ್ಯ, ಜಿ.ಪಂ ಸದಸ್ಯೆ ಶಿವಮ್ಮ, ತಾ.ಪಂ ಅಧ್ಯಕ್ಷ ರಾಜು, ಸದಸ್ಯರಾದ ಕೃಷ್ಣಪ್ಪ, ಅರುಣ್, ಸಿದ್ದಪ್ಪಾಜಿ, ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷೆ ಶಿವಾನಂದ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್‍ದೊರೆ, ವಿಧಾನಸಭಾ ಅಧ್ಯಕ್ಷ ಅಬ್ದುಲ್ ಅಜೀಜ್ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News