×
Ad

ಹನೂರು: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಎರಡನೇ ಹಂತದ ಗ್ರಾಮ ಸಭೆ

Update: 2018-01-27 18:34 IST

ಹನೂರು,ಜ.27:ಗ್ರಾಮೀಣ ಭಾಗದಲ್ಲಿ  ಪ್ರತಿಯೋಬ್ಬರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು  ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೂಳ್ಳಬೇಕೆಂದು ತಾಲೂಕು ಸಂಯೋಜಕ ಮನೋಹರ್ ತಿಳಿಸಿದರು. 
ಹನೂರು  ತಾಲ್ಲೂಕಿನ ಶಾಗ್ಯ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಎರಡನೇ ಹಂತದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಆರು ತಿಂಗಳಲ್ಲಿ ಒಟ್ಟು 46 ಕಾಮಗಾರಿಗಳಾಗಿದ್ದು ,ಅದರಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ  ದೃಷ್ಟಿಯಿಂದ ವಯಕ್ತಿಕ ಕಾಮಗಾರಿಗಳಿಗಿಂತ ಸಮುದಾಯದ ಕಾಮಗಾರಿಗಳಾದ ಚರಂಡಿ , ರಸ್ತೆ ನಿರ್ಮಾಣ, ಕೆರೆ ಅಭಿವೃದ್ದಿ ಇನ್ನಿತರ ಅಭಿವೃದ್ದಿಯ ಕಾಮಗಾರಿಗಳಿಗೆ ಒತ್ತು ನೀಡಲಾಗಿದ್ದು ಕಳೆದ ಅವಧಿಯಲ್ಲಿ, ಒಟ್ಟು ಖರ್ಚು 46 ಲಕ್ಷ ರೂ. ಗಳಾಗಿರುತ್ತದೆ ,ಅದರಲ್ಲಿ ಕೂಲಿ ಮೊತ್ತ ಅಂದಾಜು 26.40 ಲಕ್ಷ , ಮತ್ತು ಸಾಮಾಗ್ರಿ 19.60 ಲಕ್ಷಗಳಾಗಿದೆ ಎಂದು ತಿಳಿಸಿದರು 

ನಾಮ ಫಲಕಗಳನ್ನು ಅಳವಡಿಸಲು ಕ್ರಮ: ಗ್ರಾಮ ಪಂಚಾಯತ್ ಅದ್ಯಕ್ಷ ಜಾನ್‍ಪಾಲ್ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಮಫಲಕ ಆಳವಡಿಸಲು ಕ್ರಮ ಜರುಗಿಸಲಾಗುದು , ಮತ್ತು  ರಸ್ತೆಯ ಬದಿಯಲ್ಲಿ ತಿಪ್ಪೆಗುಂಡಿಗಳನ್ನು ಹಾಕಿರುವವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು 

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಪುಟ್ಟಮ್ಮ, ನೂಡೆಲ್‍ ಅಧಿಕಾರಿ ರಾಜೇಂದ್ರ ನಾಯಕ್ , ಕಾರ್ಯದರ್ಶಿ ವೆಂಕಟೇಶ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News