×
Ad

ಹನೂರು : ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ

Update: 2018-01-27 18:39 IST

ಹನೂರು,ಜ.27: ಕಳೆದ 60 ವರ್ಷಗಳ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಕ್ಷೇತ್ರದ ಜನತೆ ಈ ಬಾರಿ ಎರಡೂ ಕುಟುಂಬಗಳನ್ನು ಹೊರತುಪಡಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕುಮಾರಣ್ಣನ ಬಲ ಕೈ ಬಲಪಡಿಸಲು ಕಾತುರರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಲೋಕೇಶ್‍ ಮೌರ್ಯ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಲ್ಳಿ ಗ್ರಾಮದಲ್ಲಿ ಜರುಗಿದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಬೈಲೂರು, ಹುಣಸೇಪಾಳ್ಯ, ಅಂಡೇಕುರುಬರದೊಡ್ಡಿ, ಕಂಬುಗುಡ್ಡೆದೊಡ್ಡಿ, ಒಡೆಯರಪಾಳ್ಯ, ಉಯ್ಯಲುನತ್ತ, ಅರ್ಧನಾರಿಪುರ ಗ್ರಾಮಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಲೋಕೇಶ್ ಮೌರ್ಯ ಹನೂರು ಕ್ಷೇತ್ರ ವ್ಯಾಪ್ತಿಯ ಜನತೆ ಬಹಳ ಮುಗ್ಧ ಜನರಾಗಿದ್ದಾರೆ. ಈ ಹಿಂದಿನಿಂದಲೂ ಎರಡು ಕುಟುಂಬಗಳ ರಾಜಕೀಯದಿಂದ ಬೇಸತ್ತಿದ್ದು ಕ್ಷೇತ್ರದಲ್ಲೂ ಕುಮಾರ್ ಪರ್ವ ಪ್ರಾರಂಭಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜಾತ್ಯಾತೀತ ಜನತಾದಳಕ್ಕೆ ಆಗಮಿಸಿರುವ ತಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳಲ್ಲೂ ಜೊತೆಯಲ್ಲಿರುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೈಲೂರು ಗ್ರಾ.ಪಂ ಅಧ್ಯಕ್ಷ ಕೆಂಪಣ್ಣ, ಹುತ್ತೂರು ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಮಹೇಶ್ ಕುಮಾರ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News