ಪೊಲೀಯೋ ಮುಕ್ತ ಭಾರತ ನಿರ್ಮಿಸಬೇಕು: ಶಾಸಕ ಎಂ.ಕೆ.ಸೋಮಶೇಖರ್

Update: 2018-01-28 15:39 GMT

ಮೈಸೂರು,ಜ.28: ಪೋಲಿಯೋ ಮುಕ್ತ ಭಾರತ ಮಾಡಬೇಕೆಂಬ ಪರಿಕಲ್ಪನೆ ಎಲ್ಲರ ಮನದಲ್ಲಿದ್ದರೆ ಅದರ ನಿರ್ಮೂಲನೆ ಬೇಗ ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ಜಯನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರವಿವಾರ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನ ಮನಗಂಡು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪ್ರತೀ ವರ್ಷ ಎರಡು ಬಾರಿ ಪೋಲಿಯೋ ಹನಿ ಹಾಕಿಸುವುದು ಅತ್ಯವಶ್ಯಕ. ಇದರಿಂದ ಮಾರಕ ರೋಗವನ್ನು ನಿಯಂತ್ರಿಸಬಹುದು. ಸರ್ಕಾರ ಕೋಟ್ಯಾಂತರ ರೂ ವ್ಯಯಿಸಿ ಪೋಲಿಯೋ ನಿರ್ಮೂಲನಗೆ ಕ್ರಮ ಕೈಗೊಂಡಿದೆ. ಆಗಾಗಿ ಎಲ್ಲಾ ಪೋಷಕರು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಎಂದರು.

ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತಿದೆ. ಇದಕ್ಕಾಗಿ 1500 ನರ್ಸ್ ಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೇಯರ್ ಭಾಗ್ಯವತಿ, ಡಿಹೆಚ್.ಓ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News