ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ: ನಿಂಗಯ್ಯ
ಬಣಕಲ್,ಜ.29: ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಸೋಮವಾರ ಜೆಡಿಎಸ್‍ನ ಪಕ್ಷದ ಸಾಧನಾ ಕಾರ್ಯಕ್ರಮ ‘ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಗ್ರಾಮದ ಮನೆಗಳಿಗೆ ಬೇಟಿ ನೀಡಿ ಪಕ್ಷದ ಗೆಲುವಿಗಾಗಿ 2013ರಿಂದ 2018ರವರೆಗೆ ನಡೆದ ಪಕ್ಷ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತದಾರರು ಬೆಂಬಲ ಸೂಚಿಸಿ ಮತ ಹಾಕಿ ರಾಜ್ಯದ ಅದಿಕಾರದ ಚುಕ್ಕಾಣಿ ಹಿಡಿಯಲು ಬಯಸಿದ್ದಾರೆ ಎಂದು ನುಡಿದರು.
ಜೆಡಿಎಸ್‍ನ ಸಾಧನೆಗಳ ಮತ್ತು ಕೈಗೊಂಡ ಮೂಲಭೂತ ಸೌಲಭ್ಯಗಳು ಪ್ರಗತಿಪರ ಸಾದನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಹೊತ್ತಗೆಯನ್ನು ಮತದಾರರಿಗೆ ನೀಡಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜೆಡಿಎಸ್‍ನ ತಾಲೂಕು ಅಧ್ಯಕ್ಷ ಬಿ.ಎಸ್.ಲಕ್ಷ್ಮಣ್‍ಗೌಡ ಮಾತನಾಡಿ, ಕರ್ನಾಟಕಕ್ಕೆ ಕುಮಾರಣ್ಣ, ಮೂಡಿಗೆರೆಗೆ ಬಿ.ಬಿ.ನಿಂಗಯ್ಯ ಅಧಿಕಾರಕ್ಕೆ ಬರಲಿದ್ದಾರೆ. ಜೆಡಿಎಸ್ ಪಕ್ಷವು ಈ ಬಾರಿ ಬಹುಮತ ಸಾಧಿಸಿ ಅಧಿಕಾರಕ್ಕೆ ಬರಲಿದೆ. ಪ್ರತಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಶಾಸಕರ ಅನುದಾನದಿಂದ ಕಾಮಗಾರಿ ಮಾಡಲಾಗಿದ್ದು ಮತದಾರರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಬೇಕಿದೆ ಎಂದರು.
ಬಣಕಲ್‍ನ ಹೊರಟ್ಟಿ, ಚಕ್ಕಮಕ್ಕಿ, ಬಗ್ಗಸಗೋಡು, ಮುಂತಾದ ಗ್ರಾಮಗಳಿಗೆ ಜೆಡಿಎಸ್ ಕಾರ್ಯಕರ್ತರು ಶಾಸಕರ ಜೊತೆ ಮನೆಮನೆಗೆ ಕುಮಾರಣ್ಣನ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಕ್ಷದ ಕಾರ್ಯಕರ್ತರಾದ ಜೆಡಿಎಸ್‍ನ ಬಣಕಲ್ ಹೋಬಳಿ ಅಧ್ಯಕ್ಷ ಮಹೇಶ್, ಬಂಕೇನಹಳ್ಳಿ ಚಂದ್ರೇಗೌಡ, ಪ್ರಚಾರ ಸಮಿತಿಯ ತಾಲೂಕು ಅಧ್ಯಕ್ಷ ಶಶಿಕಾಂತ್ ಬೆಳಗೋಡು, ಅಲ್ಪಸಂಖ್ಯಾತರ ಹೋಬಳಿ ಅಧ್ಯಕ್ಷ ಅಝೀಝ್, ಮಹಮ್ಮದ್ ಇಮ್ರಾನ್, ಜಕ್ರೀಯ, ಬಿ.ಎಸ್.ದಿನೇಶ್, ರವಿಗೌಡ ಚಿಕ್ಕಮಗಳೂರು, ಆದರ್ಶ್ ಬಾಳೂರು, ಜಕ್ಲಿ ಶಂಕರ್, ಉಪೇಂದ್ರಗೌಡ, ಕರಿಯಪ್ಪ ತಳವಾರ, ಮುದ್ದುರಾಜ್, ಅಶ್ವಥ್ ಬಾಳೂರು ಮತ್ತಿತರರಿದ್ದರು.