×
Ad

ಮುಸ್ಲಿಮ್ ಸಹಕಾರಿ ಬ್ಯಾಂಕ್‌ಗೆ ಶತಮಾನೋತ್ಸವ ಸಂಭ್ರಮ

Update: 2018-01-29 22:40 IST

ಮೈಸೂರು, ಜ.29: ಮೈಸೂರು ಮೂಲದ ‘ದಿ ಮುಸ್ಲಿಮ್ ಕೋ ಆಪರೇಟಿವ್ ಬ್ಯಾಂಕ್’ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು ಶೀಘ್ರವೇ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

  ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿಯಲ್ಲಿ ಉದ್ಘಾಟಿಸುವ ನಿರೀಕ್ಷೆಯಿದೆ. 1916ರಲ್ಲಿ ಬ್ಯಾಂಕ್ ಸ್ಥಾಪನೆಯಾಗಿದೆ. 1945ರಿಂದ ಬ್ಯಾಂಕ್ ಕಾರ್ಯಾಚರಿಸುತ್ತಿರುವ ಸಯ್ಯಿಜಿ ರಾವ್ ರಸ್ತೆಯ ಕಟ್ಟಡವನ್ನು ಆಂಗ್ಲಪ್ರಜೆಯೊಬ್ಬನಿಂದ ಖರೀದಿಸಲಾಗಿದ್ದು ಈ ಕಟ್ಟಡದ ಹಿಂಭಾಗದಲ್ಲಿ ಬ್ಯಾಂಕ್‌ನ ಪ್ರಧಾನಕಚೇರಿಯನ್ನು ನಿರ್ಮಿಸಲಾಗಿದೆ.

    ಬ್ಯಾಂಕ್‌ನಲ್ಲಿ ಸುಮಾರು 1,500 ಠೇವಣಿದಾರರಿದ್ದು ಇವರಲ್ಲಿ 700 ಜನ ಚಾಲ್ತಿಖಾತೆ(ಕರೆಂಟ್ ಅಕೌಂಟ್) ಹೊಂದಿದ್ದಾರೆ. 68.50 ಕೋಟಿ ರೂ. ಠೇವಣಿ ಹೊಂದಿದ್ದು 39 ಕೋಟಿ ರೂ. ಸಾಲ ನೀಡಲಾಗಿದೆ. 2018ರಲ್ಲಿ 100 ಕೋಟಿ ರೂ. ಸಂಗ್ರಹಿಸಿ ಸಾಲದ ಮೊತ್ತವನ್ನು 75 ಕೋಟಿ ರೂ.ಗೆ ಹೆಚ್ಚಿಸುವ ಗುರಿಯಿದೆ. 2016-17ರಲ್ಲಿ ಬ್ಯಾಂಕ್ 1.03 ಕೋಟಿ ರೂ. ಲಾಭ ಗಳಿಸಿದ್ದು ಶೇರ್‌ಹೋಲ್ಡರ್ಸ್‌ಗೆ ಶೇ.10 ಡಿವಿಡೆಂಡ್ ನೀಡಲು ಶಿಫಾರಸು ಮಾಡಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹುಮಾಯೂನ್ ತಿಳಿಸಿದ್ದಾರೆ.

ಅಲ್ಲದೆ ಶೀಘ್ರದಲ್ಲೇ ಎಟಿಎಂ, ಕೋರ್‌ಬ್ಯಾಂಕಿಂಗ್ (ಸಿಬಿಎಸ್) ಸೇವೆ, ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಸೇವೆಗಳನ್ನು ಒದಗಿಸಲಾಗುವುದು ಎಂದು ಹುಮಾಯೂನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News