×
Ad

ತಡೆಗೋಡೆಗೆ ಬೈಕ್ ಢಿಕ್ಕಿ: ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2018-01-29 23:04 IST

ಕೊಳ್ಳೇಗಾಲ,ಜ.28: ಮದುವೆಗೆ ಆಗಮಿಸಿ ನಂತರ ಬೆಂಗಳೂರಿಗೆ ಬೈಕ್‍ನಲ್ಲಿ ಹಿಂತಿರುಗುವಾಗ ಆಯತಪ್ಪಿ ರಸ್ತೆ ಬದಿಯ ತಡೆಗೋಡೆ ಹಾಗೂ ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂದಿನ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಸರಗೂರು ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನ ಪಿಣ್ಯದ ಡೈನಾಟೆಕ್ ಟೂಲ್ಸ್ ಮತ್ತು ಡಿವೈಸಸ್ ಕಂಪನಿ ಉದ್ಯೋಗಿ ರವಿ ಪಟಗಾರ್ ಮೃತ ವ್ಯಕ್ತಿ. ಮೂಲತ ಉತ್ತರ ಕರ್ನಾಟಕ ಜಿಲ್ಲೆಯ ಎಲ್ಲಾಪುರ ತಾಲೂಕಿನ ಗುಲ್ಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ. 

ಮತ್ತೊಬ್ಬ ಬೈಕ್‍ ಸವಾರ ದಯಾನಾಯಕ್ ಹಾಗೂ ರಸ್ತೆ ಬದಿಯಲ್ಲಿದ್ದ ಹುಣಸೂರು ತಾಲೂಕಿನ ಬಿಳೆಕೆರೆ ಮೂಲದ ಬಸವರಾಜ್ ಎಂಬುವವರು ತೀವ್ರ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News