ಹನೂರು: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
ಹನೂರು,ಜ.30: ಕ್ಷೇತ್ರ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮವನ್ನು ಗ್ರಾಮ ವಿಕಾಸಯೋಜನೆಯಡಿ ಅಭಿವೃದ್ದಿ ಪಡಿಸಲು ಅಂದಾಜು 1 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಬಂಡಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ 52.80 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಅಭಿವೃದ್ದಿ ಕಾಮಗಾರಿಗಳು ನಡೆಯುವಾಗ ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿದೆಯೇ ಎಂದು ಪರಿಶೀಲಿಸಿ ಗುತ್ತಿಗೆದಾರರಿಗೆ ಸಹಕಾರ ನೀಡುವಂತೆ ಮತ್ತು ಕಳ್ಳಿದೂಡ್ಡಿ ಗ್ರಾಮವನ್ನು ಗ್ರಾಮ ವಿಕಾಸದಡಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ, ಗ್ರಾಮದ ಪ್ರತಿಯೊಂದು ಕಾಲೋನಿಗೂ ಸಿಮೆಂಟ್‍ರಸ್ತೆ, ಬೀದಿ ದೀಪಗಳು, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ದೇವಸ್ಥಾನ ಅಭಿವೃದ್ದಿ ಮತ್ತು ಗ್ರಾಮದ ಎಲ್ಲಾ ಕಡೆ ಮಣ್ಣು ಮುಕ್ತ ರಸ್ತೆಯಾಗಲಿದೆ ಎಂದು ತಿಳಿಸಿದರು
ಗುದ್ದಲಿ ಪೂಜೆ: ಬಂಡಳ್ಳಿ ಗ್ರಾಮದ ನಾಯಕರ ಬಡಾವಣೆ ಸಿ.ಸಿ.ರಸ್ತೆಗೆ 12.80 ಲಕ್ಷ, ಕಳ್ಳಿದೊಡ್ಡಿ 15ಲಕ್ಷ, ಗಾಣಿಮಂಗಲದಲ್ಲಿ 10 ಲಕ್ಷ, ತೋಮಿಯಾರ್‍ಪಾಳ್ಯ 10 ಲಕ್ಷ ಹಾಗೂ ದನೆಯ್ಕಾರನದೊಡ್ಡಿ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ಭೂಮಿ ಪೂಜೆ ನೇರವೇರಿಸದರು. ಕಳ್ಳಿ ದೊಡ್ಡಿ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಶುದ್ದ ನೀರಿನ ಘಟಕ, ದೇವಸ್ಥಾನ, ಹೈಮಾಸ್ ಲೈಟ್ ಸೇರಿದಂತೆ ರಸ್ತೆಗಳನ್ನು ಮಾಡಿ ಗ್ರಾಮವನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿ ಪಂ ಸದಸ್ಯೆ ಲೇಖಾರವಿಕುಮಾರ್, ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ತಾಲ್ಲೂಕು ಸ್ಥಾಯಿ ಸಮಿತಿ ಅದ್ಯಕ್ಷ ಜವಾದ್‍ಅಹ್ಮದ್, ಗ್ರಾ.ಪಂ ಅಧ್ಯಕ್ಷ ರಾಚಪ್ಪ, ಶಾಗ್ಯ ಗ್ರಾ.ಪಂ ಅಧ್ಯಕ್ಷ ಜಾನ್‍ಪೌಲ್, ಸದಸ್ಯರಾದ ಷಾಹುಲ್‍ಅಹಮದ್, ಮುಖಂಡರಾದ ಬಸವರಾಜು ಹಾಗೂ ಚಾಲ್ಸ್ ತೋಮಿಯರ್‍ಪಾಳ್ಯ ಗ್ರಾಮಸ್ಥರು ಹಾಜರಿದ್ದರು.