ಶ್ರೀರಂಗಪಟ್ಟಣ: ಮಂಗಳೂರು ಮೂಲದ ವ್ಯಕ್ತಿ ಸಾವು
Update: 2018-01-30 23:59 IST
ಶ್ರೀರಂಗಪಟ್ಟಣ, ಜ.30: ಮಂಗಳೂರು ಮೂಲದ ವ್ಯಕ್ತಿಯೊಬ್ಬರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ಮಂಗಳೂರಿನ ಅರುಣ ಎನ್ನಲಾಗಿದೆ.
ಪಟ್ಟಣದ ಅಂಗಡಿಯೊಂದರ ಮುಂದೆ ಕುಳಿತ್ತಿದ್ದ ಇವರು ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾರೆ. ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ವರದಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಗುರುತುಗಳಿದ್ದು, ತಾನು ಮಂಗಳೂರಿನಲ್ಲಿ ಹೊಟೇಲ್ ನಡೆಸುತ್ತಿದ್ದೆ. ನಷ್ಟಹೊಂದಿದ ನಂತರ ವರ್ಷದಿಂದ ಊರು ತೊರೆದಿದ್ದೇನೆ. ನನ್ನ ಹೆಸರು ಅರುಣ ಎಂದು ಅವರು ಸಾಯುವ ಮುನ್ನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮೈಸೂರಿನ ಕೆ.ಅರ್.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾರಸುದಾರರು ಸಂಪರ್ಕಿಸಲು ಕೋರಿದ್ದಾರೆ.