×
Ad

ಕುಮರಗಿರಿಯಲ್ಲಿ ಮಾ.30ರಂದು ಸರಳ ಸಾಮೂಹಿಕ ವಿವಾಹ

Update: 2018-01-31 17:16 IST

ಚಿಕ್ಕಮಗಳೂರು, ಜ.31: ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮರಗಿರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಮಾ.30ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ ದೇವಾಲಯದ ಧರ್ಮದರ್ಶಿ ಪ್ರಧಾನ ಕಾರ್ಯದರ್ಶಿ ಜಿ.ರಮೇಶ್ ತಿಳಿಸಿದ್ದಾರೆ.

ಅವರು ಈ ಕುರಿತು ಬುಧವಾರ ಹೇಳಿಕೆ ನೀಡಿದ್ದು, ಪಂಗುನಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ನಡೆಸಲಾಗುತ್ತಿದ್ದು, ಎಲ್ಲಾ ಜಾತಿ, ಧರ್ಮದ ವಧು-ವರರು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 21 ವರ್ಷ ವಧುವಿಗೆ 18 ವರ್ಷ ತುಂಬಿರಬೇಕಾಗಿದ್ದು, ಇದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ವಿವಾಹದಲ್ಲಿ ಭಾಗವಹಿಸುವ ವಧೂ-ವರರಿಗೆ ವಸ್ತ್ರ ಹಾಗೂ ಮಾಂಗಲ್ಯವನ್ನು ದೇವಾಲಯದ ವತಿಯಿಂದ ವಿತರಿಸಲಾಗುವುದೆಂದು ತಿಳಿಸಿದ್ದಾರೆ. 

ಕಳೆದ 20 ವರ್ಷಗಳಿಂದ ನಡೆಸಿಕೊಂಡುಬರುತ್ತಿರುವ ಈ ಸಾಮೂಹಿಕ ವಿವಾಹ ಈ ಬಾರಿ 21 ನೇ ವರ್ಷದ ಸಾಮೂಹಿಕ ವಿವಾಹವಾಗಿದ್ದು, ರಾಜ್ಯದ ಯಾವುದೇ ಜಿಲ್ಲೆಗಳಿಂದ ವಧೂ-ವರರ ಈ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ತಮ್ಮ ವಿಳಾಸ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿ.ರಮೇಶ್, ಪ್ರ.ಕಾರ್ಯದರ್ಶಿ, ಶ್ರೀ ಕುಮರಗಿರಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ದೂರವಾಣಿ: 94481 33838 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News