ಕೆಟ್ಟ ಜಾಲ ಸೇರುವುದರಿಂದ ಹೆಸರು ವ್ಯಕ್ತಿತ್ವ ಹಾಳಾಗುತ್ತದೆ: ವಿಜಯ ಕುಮಾರ್
ಚಿಕ್ಕಮಗಳೂರು, ಜ.31: ಕೆಟ್ಟದ್ದನ್ನು ಕಲಿತು ಇಲ್ಲಿಗೆ ಬಂದಿದ್ದೀರಿ. ಕೆಟ್ಟ ಜಾಲ ಸೇರುವುದರಿಂದ ಹೆಸರು ವ್ಯಕ್ತಿತ್ವ ಹಾಳಾಗುತ್ತದೆ ಎಂದು ಜಿಲ್ಲಾ ಕಾರಗೃಹ ಅಧೀಕ್ಷಕ ವಿಜಯಕುಮಾರ್ ಚವಾಣ್ ತಿಳಿಸಿದರು.
ಅವರು ನಗರದ ರತ್ನಗಿರಿ ಹಿಂಭಾಗದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ರಚಿತಾ ಮಹಿಳಾ ಸಮಾಜ ಹಾಗೂ ಜೈಲಿನ ಹುತಾತ್ಮರ ದಿನಾಚರಣೆಗಳ ಸಹಯೋಗದಲ್ಲಿ ಆಚರಿಸಿ ಮಾತನಾಡುತ್ತಿದ್ದರು. ಮಾಡಿದ ತಪ್ಪನ್ನು ಪುನಃ ಮಾಡಬೇಡಿ.ಜೀವನ ಮುನ್ನಡೆಗೆ ಅಗತ್ಯದ ಮಾರ್ಗದಲ್ಲಿ ನಡೆಯಬೇಕು. ಬಂದೀಖಾನೆ ನಿಮ್ಮನ್ನು ಆಲೋಚನೆಗಳಿಗೆ ಗುರಿ ಮಾಡುತ್ತದೆ.ಉತ್ತಮ ಆಲೋಚನೆಗಳಿಂದ ಮುನ್ನಡೆಯಿರಿ. ಸೋಮಾರಿಗಳಾಗಿ ಇಲ್ಲಿ ಜೀವನ ಕಳೆಯದೆ ಇಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಇಲ್ಲಿರುವರೆಲ್ಲಾ ಹೆಚ್ಚಾಗಿ ದುಡಿಯುವ ಮಯಸ್ಸಿವರಾಗಿದ್ದಿರಿ, ಮೈಗಳ್ಳತನ ಬೆಳೆಸಿಕೊಳ್ಳದೆ ಇಲ್ಲಿಂದ ಹೊರಗಡೆ ಹೋದನಂತರ ಜೀವನ ಸಾಗಿಸುವ ಉತ್ತಮ ಯೋಚನೆ ಮಾಡಿ ಕಾರ್ಯ ನಿರ್ವಹಿಸಿರಿ ಎಂದು ಕರೆ ನೀಡಿದರು.
ಜೈಲಿನ ವಾಸಿಗಳಿಂದ ನಿರ್ಮಾಣವಾದ ಪಂಪ್‍ಹೌಸ್ ಉದ್ಘಾಟಿಸಿ ಹಿರಿಯ ಪತ್ರಕರ್ತ ಜಿ.ವಿ.ಚೂಡನಾಥ್ ಅಯ್ಯರ್ ಮಾತನಾಡಿ, ಜೈಲಿನ ವಾಸಿಗಳೇ ಈ ಕಾರ್ಯ ಮಾಡಿರುವುದನ್ನು ಶಾಘ್ಲಸಿದರು.
ರಚಿತಾ ಮಹಿಳಾ ಸಮಾಜದ ಕಾರ್ಯದರ್ಶಿ ಕವಿತಾ ಗೋಪಾಲ್ ಮಾತನಾಡಿದರು. ರಚಿತಾ ಮಹಿಳಾ ಸಮಾಜ ಹಾಗೂ ಶ್ರೀಮತಿ ಗ್ರೇಸ್ ಎರಡು ಹೊಲಿಗೆ ಯಂತ್ರಗಳನ್ನು ಜೈಲಿನ ಸಿಬ್ಬಂದಿಯವರಿಗೆ ಕೊಡುಗೆಯಾಗಿ ನೀಡಿದರು. ಜೈಲ್ ಆಧೀಕ್ಷರ ವಿಜಯಕುಮಾರ್ ಈ ಸಂಸ್ಥೆಯನ್ನು ಅಭಿನಂದಿಸಿದರು.
ಪ್ರಧಾನ ವೀಕ್ಷಕರಾದ ನಂಜಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೂ ಲೀಲಾ ವಿಶ್ವೇಶ್ವರ್ ಶೈಲಾ ಗ್ರೇಸ್ ಉಪಸ್ಥಿತರಿದ್ದರು.