×
Ad

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳಿಗೆ ಶಿಕ್ಷೆ

Update: 2018-01-31 23:03 IST

ಚಿಕ್ಕಮಗಳೂರು, ಜ.31: ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪಿತರಿಗೆ 2 ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

2014 ರ ಮೇ.31 ರಂದು ಚಿಕ್ಕಮಗಳೂರು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿಗಳಾದ ಸಂಭ್ರಮ ಮತ್ತು ಮಂಜುನಾಥಗೌಡ, ಲೋಲಾಕ್ಷಿ ಮಲ್ಲಂದೂರು ಠಾಣೆಗೆ ಅರ್ಜಿ ವಿಚಾರಣೆಗೆ ಬಂದಿದ್ದರು. ಕರ್ತವ್ಯದ ಮೇಲಿದ್ದ ಪೊಲೀಸ್ ಹೆಡ್‍ಕಾನ್ಸ್ ಟೇಬಲ್ ನಾಗೇಂದ್ರರಾಜೇ ಅರಸ್‍ಗೆ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು, ಧರಿಸಿದ್ದ ಖಾಕಿ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಪ್ರಾಣ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಮಲ್ಲಂದೂರು ಠಾಣಾ ಪೊಲೀಸರು ಕಲಂ 353, 323, 506, 504 ಜೊತೆಯಲ್ಲಿ 34 ರಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಅರುಣಕುಮಾರಿ ರವರು ಆರೋಪಿಗಳಾದ ಸಂಭ್ರಮ್ ಮತ್ತು ಮಂಜುನಾಥ ಗೌಡ ರವರಿಗೆ 4 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ಆರೋಪಿ ಲೋಲಾಕ್ಷಿ ಗೆ ರೂ.5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಆಶಾರಾಣಿ.ಕೆ ಮೊಕದ್ದಮೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News