ನಾಗರಹೊಳೆಯಲ್ಲಿ ಹುಲಿ ಸಾವು
Update: 2018-01-31 23:11 IST
ಶ್ರೀಮಂಗಲ, ಜ.31: ನಾಗರಹೊಳೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 3-4 ವಯಸ್ಸಿನ ಗಂಡುಹುಲಿ ಸಾವಿಗೀಡಾಗಿದೆ. ಮತ್ತೊಂದು ಹುಲಿ ಕಾದಾಟದ ವೇಳೆ ತೀವ್ರ ಗಾಯಗೊಂಡು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಹುಲಿಯ ಕಳೆಬರದಲ್ಲಿ ಕೊರಳು, ಮುಖ, ಕೈ ಹಾಗೂ ದೇಹದ ಹಲವು ಭಾಗದಲ್ಲಿ ಮತ್ತೊಂದು ಹುಲಿ ದಾಳಿ ನಡೆಸಿ ಆಳವಾದ ಗಾಯ ಮಾಡಿರುವ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆಯ ಮಣಿಕಂದನ್, ನಾಗರಹೊಳೆ ಎಸಿಎಫ್ ಪೌಲ್ ಆಂಥೋಣಿ, ಆರ್‌ಎಫ್‌ಒ ರವೀಂದ್ರ, ರಾಜಕುಮಾರ್, ಕುಂಞಿಂಗಡ ಬೊಸ್ ಮಾದಪ್ಪ ಸಮ್ಮುಖದಲ್ಲಿ ಮಹಜರು ನಡೆಯಿತು. ವನ್ಯಜೀವಿ ವೈದ್ಯಾಧಿಕಾರಿ ಡಾ. ಮಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು.