ದಾವಣಗೆರೆ : ಪ್ರತಿಭಾ ವಿಕಾಸ ಸಂಘದ ಸಮಾರೋಪ

Update: 2018-01-31 17:52 GMT

ದಾವಣಗೆರೆ,ಜ.31:ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ತೋರಿರುವ ಸಾಧಕರಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲೇ ವ್ಯಾಸಂಗ ಮಾಡಿದವರೇ ಮುಂಚೂಣಿಯಲ್ಲಿದ್ದಾರೆ. ಅದ್ದರಿಂದ  ಮಕ್ಕಳು ಸರ್ಕಾರಿ ಶಾಲೆ ಎನ್ನುವ ಕೀಳರಿಮೆ ಬಿಟ್ಟು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಉನ್ನತ ಎತ್ತರಕ್ಕೇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಶ್ರೀದೇವಿ ಕಿವಿಮಾತು ಹೇಳಿದರು. 

ಇಲ್ಲಿನ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ, ಪ್ರತಿಭಾ ವಿಕಾಸ ಸಂಘದ
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಇರಬೇಕು. ಹಿಂದೆ ಗುರುವಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಗುರುವನ್ನು ಬದಿಗೊತ್ತುವ ಕೆಲಸವಾಗುತ್ತಿದ್ದು, ಇದು ಸರಿಯಲ್ಲ. ನಿಮ್ಮಲ್ಲಿ ಛಲವಿರಬೇಕು. ಆದರೆ, ಹಠವಿರಬಾರದು. ನೀವು ಸಾಧಿಸಬೇಕಾದ ಗುರಿಯ ಬಗ್ಗೆ ನಿಮ್ಮಲ್ಲಿ ಅರಿವಿರಬೇಕು ಎಂದು ಕಿವಿಮಾತು ಹೇಳಿದರು.

ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣನ್ನು ನೋಡುವ ಮನೋಭಾವ ಬದಲಾಗಬೇಕು. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಅಪ್ರತಿಮ  ಸಾಧನೆ ತೋರಿದ್ದು, ದೇಶದ ಪ್ರಗತಿಗೆ ಕಾರಣರಾಗಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕೆಂಗಬಾಲಯ್ಯನವರು ಮಾತನಾಡಿ, ಪಠ್ಯದ ಜೊತೆಗೆ ರಾಮಕೃಷ್ಣ ಪರಮಹಂಸರು, ವಿವೇಕಾನಂದರಂತಹ ಮಹಾಪುರುಷರ ಜೀವನ ಚರಿತ್ರೆಗಳನ್ನು ಓದಿ ಸ್ಪೂರ್ತಿ ಹೊಂದಬೇಕು. ವೈಜ್ಞಾನಿಕ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ.ಶಿವಕುಮಾರ್ ಬಹುಮಾನ ವಿತರಿಸಿದರು. ಪ್ರಾಚಾರ್ಯ ಜೆ.ಆರ್.ಮೋಹನ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ, ಕರಿಯಪ್ಪ ಬಾರಿಕರ, ಉಪ ಆರೋಗ್ಯಾಧಿಕಾರಿ ಹೆಚ್.ಉಮಾಪತಿ, ಎಂ.ಎನ್.ಸಮೀವುಲ್ಲಾ, ಉಷಾ ಕಾಶೀನಾಥ್, ಎಸ್.ಎಂ.ಗೌಸ್, ಬಿ.ಪಿ.ಮಂಜುಳ, ಹೆಚ್.
ಎಂ.ಬಸವರಾಜಪ್ ಇನ್ನಿತರರು ಉಪಸ್ಥಿತರಿದ್ದರು. ಸಿ.ಕಾವ್ಯ ಪ್ರಾರ್ಥಿಸಿದರು. ಉಪನ್ಯಾಸಕ ಆರ್.ಸಿದ್ದೇಶ್ವರಪ್ಪ ಸ್ವಾಗತಿಸಿದರು. ಪ್ರಾಸ್ತಾವಿಕ
ಹಾಗೂ ವಾರ್ಷಿಕ ವರಿಯನ್ನು ಡಿ.ಬಿ.ಅನ್ನಪೂರ್ಣ ಓದಿದರು. ಅರುಣಕುಮಾರಿ ಬಿರಾದಾರ್, ಸಿ.ಎಸ್.ಪ್ರಸನ್ನಕುಮಾರ್, ಅನ್ನಪೂರ್ಣ ಪಾಟೀಲ್ ಇನ್ನಿತರರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News