×
Ad

ಗುಡಿಸಲು ನೆಲಸಮ ಆರೋಪ: ಕುಟುಂಬಸ್ಥರ ಪ್ರತಿಭಟನೆ

Update: 2018-02-01 22:11 IST

ಮದ್ದೂರು, ಫೆ.1: ತಾಲೂಕಿನ ಗೊರವನಹಳ್ಳಿಯ ಸ್ವಂತ ನಿವೇಶನದಲ್ಲಿದ್ದ ಗುಡಿಸಲನ್ನು ತಾಲೂಕು ಆಡಳಿತ ಮತ್ತು ಗ್ರಾಪಂ ಅವರು ಯಾವುದೇ ನೊಟೀಸ್ ನೀಡದೆ ತೆರವು ಮಾಡಿದ್ದಾರೆಂದು ಆರೋಪಿಸಿ ಗ್ರಾಮದ ರಾಜಣ್ಣ ಅವರ ಪುತ್ರ ದಾಸೇಗೌಡ ರಾಜಣ್ಣ ಅವರ ಕುಟುಂಬ ವರ್ಗದವರು ಪಂಚಾಯತ್ ಮುಂದೆ ಗುರುವಾರ ಜಾನವಾರುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು.

ನೊಟೀಸ್ ನೀಡದೆ, ಕಾಲಾವಕಾಶ ನೀಡದೆ ಏಕಾಏಕಿ ದಬ್ಬಾಳಿಕೆ, ದೌರ್ಜನ್ಯದಿಂದ ವಾಸ ಮಾಡುತ್ತಿದ್ದ ಮನೆ ಗುಡಿಸಲನ್ನು ನೆಲಸಮ ಮಾಡಿದ್ದಾರೆ. ಇದರಿಂದ ಅಪಾರ ನಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ನ್ಯಾಯಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.

ದರ್ಶನ್ ಮಾತನಾಡಿ, 30 ವರ್ಷದಿಂದ ವಾಸವಾಗಿದ್ದ ಮನೆಯನ್ನು ತಹಸೀಲ್ದಾರ್ ನಾಗರಾಜುರವರು ದಬ್ಬಾಳಿಕೆಯಿಂದ ಪಾತ್ರೆ, ಬಟ್ಟೆ, ಧವಸಧಾನ್ಯ ಹಾಗೂ ಮನೆ ಕಟ್ಟಲು ತಂದಿದ್ದ ಸಾಲದ ಹಣ 2 ಲಕ್ಷ ರೂ. ಸಮೇತ ಮನೆಯನ್ನು ಜೆಸಿಬಿ ಯಂತ್ರದಿಂದ ನೆಲಸಮ ಮಾಡಿಸಿದ್ದಾರೆ ಎಂದು ಆರೋಪಿಸಿದರು.

230\ 1 ರಲ್ಲಿ ಪೂರ್ವ ಪಶ್ಚಿಮ 125 ಅಡಿ, ಉತ್ತರ ದಕ್ಷಿಣ 66 ಅಡಿ ಜಾಗದಲ್ಲಿ ಸುಮಾರು ವರ್ಷಗಳ ಹಿಂದೆಯೇ ವಾಸ ಮಾಡುತ್ತಿದ್ದೆವು. ಸಾರ್ವಜನಿಕರು ತಿರುಗಾಡಲು ನಮ್ಮ ಜಾಗವನ್ನು ಬಿಡಿಸಿಕೊಂಡು, ನಮಗೆ ಬೇರೆ ನಿವೇಶನವನ್ನು ಗ್ರಾಮ ಪಂಚಾಯತ್‍ನವರು ಬರೆದುಕೊಟ್ಟಿದ್ದರು. ಆದರೆ, ಈಗ ಏಕಾಏಕಿ ಗುಡಿಸಲು ನೆಲಸಮ ಮಾಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.

ರತ್ನಮ್ಮ, ಶಿವಮ್ಮ, ರತ್ನ, ಶಿವಬೋರ, ಧನುಷ್, ದಾಸೇಗೌಡ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News