ಮದ್ದೂರು: ಅಕ್ರಮ ಗ್ರಾನೈಟ್ ಸಾಗಾಣೆ ಲಾರಿ ವಶಕ್ಕೆ
Update: 2018-02-02 23:09 IST
ಮದ್ದೂರು, ಫೆ.2: ಅಕ್ರಮವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಅರಣ್ಯಾಧಿಕಾರಿಗಳು ಗುರುವಾರ ತಡರಾತ್ರಿ ಸಮೀಪದ ವೈದ್ಯನಾಥಪುರ ಮಾರ್ಗದ ರಸ್ತೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ಚಾಮರಾಜಕ್ಕೆ ಗ್ರಾನೈಟ್ ಕಲ್ಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ರವಿಕುಮಾರ್, ಸಿಬ್ಬಂದಿ ದಾಳಿ ನಡೆಸಿದರು.
ಚಾಲಕರು ಲಾರಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಪರವಾನಗಿ ಇಲ್ಲದೆ ಗ್ರಾನೈಟ್ ಕಲ್ಲನ್ನು ಸಾಗಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.