ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ: ಅಂಬರೀಶ್
ಮದ್ದೂರು, ಫೆ.2: ನಾನು ಆರೋಗ್ಯವಾಗಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಹಾಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದು ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ದೊಡ್ಡರಸಿನಕೆರೆಗೆ ಕಾರ್ಯಕ್ರಮಕ್ಕೆ ಶುಕ್ರವಾರ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಆರೋಗ್ಯದ ಬಗ್ಗೆ ಸಲ್ಲದ ಊಹಾಪೋಹ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ಸಂದರ್ಭ ಅನಾರೋಗ್ಯ,ಇತರೆ ಕಾರ್ಯಭಾರ ಒತ್ತಡದಿಂದ ಕ್ಷೇತ್ರದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗಿಲ್ಲ. ಇದರಿಂದ ಕ್ಷೇತ್ರದ ಪ್ರಗತಿ, ಜನರ ಸಮಸ್ಯೆ ಕಡೆಗಣಿಸಿಲ್ಲ. ಈ ವಿಚಾರದಲ್ಲಿ ಟೀಕೆ ಟಿಪ್ಪಣಿ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಮಾಜಿ ಶಾಸಕ ಡಾ.ಮಹೇಶ್‍ಚಂದ್, ತಾಪಂ ಸದಸ್ಯರಾದ ಭರತೇಶ್, ಕೆ.ಸಿ.ಪ್ರಕಾಶ್, ಮುಖಂಡರಾದ ಸಿ.ಟಿ.ಶಂಕರ್, ನಾಗೇಶ್, ಮಹೇಂದ್ರ, ನಿಡಘಟ್ಟ ಹರೀಶ, ಧನಂಜಯ, ಬಾಬು ಗೆಜ್ಜಲಗೆರೆ, ಮಹೇಂದ್ರ ಇತರರು ಹಾಜರಿದ್ದರು.