ಐಬ್ರೆಸ್ಟ್ ಸಾಧನ ಮಹಿಳೆಯರಿಗೆ ವರದಾನ: ಡಾ.ವೇದ ಪ್ರಿಯಾ
ಮೈಸೂರು,ಫೆ.3: ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ “ಐಬ್ರೆಸ್ಟ್” ವೈದ್ಯಕೀಯ ಸಾಧನ ಬಿಡುಗಡೆಯನ್ನು ಇಂದು ಪತ್ರಕರ್ತರ ಭವನದಲ್ಲಿ ನೆರವೇರಿಸಲಾಯಿತು.
ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಸ್ಪತ್ರೆಯ ವೈದ್ಯೆ ಡಾ.ವೇದ ಪ್ರಿಯಾ ಅವರು ಮಾತನಾಡಿ, ಸ್ತನ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚುವ “ಐಬ್ರೆಸ್ಟ್”ಸಾಧನವು ಮಹಿಳೆಯರಿಗೆ ವರದಾನವಾಗಲಿದೆ. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಧನವನ್ನು ಪರಿಚಯಿಸಲಾಗುತ್ತಿದ್ದು, ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಸ್ಪತ್ರೆ ವತಿಯಿಂದ ಐಬ್ರೆಸ್ಟ್ ಪರೀಕ್ಷಾ ಸೇವೆಯನ್ನು ನಾಳೆ ಫೋರಂ ಹಾಗೂ ಹೆಬಿಟೆಟ್ ಮಾಲ್ ನಲ್ಲಿ ನಡೆಸಲಿದ್ದು, ನಂತರ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ಇದರ ಸೇವೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡುವುದರಿಂದ ರೋಗಿಯನ್ನು ಕಾಪಾಡುವುದರೊಂದಿಗೆ ಅಂಗವನ್ನು ಉಳಿಸಿಕೊಳ್ಳಲು ನೆರವಾಗುವುದು. . ಕೇವಲ15 ರಿಂದ 20 ನಿಮಿಷ ಪರೀಕ್ಷಾ ಅವಧಿಯಿದ್ದು, ಪರೀಕ್ಷೆಯ ಸಂಪೂರ್ಣ ವಿವರ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಾಗಲಿದ್ದು, ಅನುಮಾನ ಮೂಡಿದರೆ ತಕ್ಷಣವೇ ತಜ್ಞರನ್ನು ಬೇಟಿಯಾಗಿ ಪರೀಕ್ಷಿಸಿಕೊಳ್ಳಲು ನೆರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥ ಕೆ.ವಿ.ಕಾಮತ್, ಡಾ.ನವೀನ್ ಅಣ್ವೇಕರ್, ಡಾ.ಮೇಘನಾ ಮೊದಲಾದವರು ಇದ್ದರು.