ಚಿಕ್ಕಮಗಳೂರು: 12 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ
Update: 2018-02-03 21:11 IST
ಚಿಕ್ಕಮಗಳೂರು, ಫೆ.3: ಮನೆಯ ಅಂಗಳದಲ್ಲಿ ಅವಿತು ಕುಳಿತಿದ್ದ 12 ಅಡಿಯ ಬೃಹತ್ ಕಾಳಿಂಗ ಸರ್ಪವನ್ನು ಚಿಕ್ಕಮಗಳೂರಿನ ಸ್ನೇಕ್ ನರೇಶ್ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಎಂಬಲ್ಲಿನ ಪ್ರಭಾಕರ್ ಗೌಡ ಎಂಬವರ ಮನೆಯಲ್ಲಿ ಈ ಬೃಹತ್ ಕಾಳಿಂಗವನ್ನು ಸೆರೆ ಹಿಡಿದಿದ್ದಾರೆ. ಸಂಜೆ 8.30 ರ ವೇಳೆಗೆ ಬಂದ ಕಾಳಿಂಗವನ್ನು ನೋಡಿ ನಾಯಿಗಳು ಬೊಗಳಿದ್ದು, ಕೂಡಲೇ ಮನೆಯವರು ಹೊರಬಂದಿದ್ದಾರೆ. ಕಾಳಿಂಗ ಪೊದೆಯೊಳಗೆ ಹೋಗುವುದನ್ನು ನೋಡಿದ ಮನೆಯವರು, ಸ್ನೇಕ್ ನರೇಶ್ ಗೆ ವಿಷಯ ಮುಟ್ಟಿಸಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ನರೇಶ್, 2 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ 12 ಗಂಟೆ ಸುಮಾರಿಗೆ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.