×
Ad

ಕೃಷ್ಣರಾಜಪೇಟೆ: ಆಕಸ್ಮಿಕ ಬೆಂಕಿ: ಎಂಟು ರಾಗಿ ಬಣವೆ ಭಸ್ಮ

Update: 2018-02-03 22:00 IST

ಕೃಷ್ಣರಾಜಪೇಟೆ, ಫೆ.3: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗಡಿಗ್ರಾಮ ಗಿಡದ ಬೊಪ್ಪನಹಳ್ಳಿಯಲ್ಲಿ ಆಕಸ್ಮಿಕವಾಗಿ ಬೆಂಕಿಬಿದ್ದು 8 ಹುಲ್ಲಿನ ಬಣವೆಗಳು ಸಂಪೂರ್ಣವಾಗಿ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಬೋರೇಗೌಡ, ವಿಶ್ವೇಶ್ವರಯ್ಯ, ಜಯರಾಮು, ಬೋರಲಿಂಗೇಗೌಡ, ಇಂದ್ರಮ್ಮ, ಹುಚ್ಚೇಗೌಡ, ಸಾಕಮ್ಮ ಮತ್ತು ಕಾಳೇಗೌಡ ಅವರಿಗೆ ಸೇರಿದ ರಾಗಿ ಹುಲ್ಲಿನ ಮೆದೆಗಳು ಬೆಂಕಿಗಾಹುತಿಯಾಗಿದ್ದು, ದನಕರುಗಳಿಗೆ ಮೇವು ಇಲ್ಲದಂತಾಗಿದೆ.  

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಬಹುತೇಕ ಹುಲ್ಲು ಭಸ್ಮವಾಗಿದೆ. ಸುಮಾರು ಒಂದೂವರೆ ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ನಾಗಮಂಗಲ ಡಿವೈಎಸ್‍ಪಿ ಧರ್ಮೇಂದ್ರ, ಸಿಪಿಐ ಎಚ್.ಬಿ.ವೆಂಕಟೇಶಯ್ಯ, ಸಬ್‍ಇನ್ಸ್‍ಪೆಕ್ಟರ್ ಎಚ್.ಎಸ್.ವೆಂಕಟೇಶ್ ಅಗ್ನಿಶಾಮಕ ಠಾಣಾಧಿಕಾರಿ  ಠಾಣಾಧಿಕಾರಿ ಶ್ರೀನಿವಾಸರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News