ಹನೂರು: ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹನೂರು ಫುಟ್ ಬಾಲ್ ತಂಡ

Update: 2018-02-03 17:07 GMT

ಹನೂರು,ಫೆ.03 : 2017 -18 ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಹನೂರು ಪುಟ್‍ಬಾಲ್‍ ತಂಡ ಚಾಮರಾಜ ನಗರದ ಡಿಡಿಪಿಐ ತಂಡದ ವಿರುದ್ದ 5 -0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ, ಮುಂದಿನ ವಾರ ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಚಾಮರಾಜನಗರದ ಡಾ.ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ನೌಕರರ ತಂಡಗಳಾದ ಕಂದಾಯ ಇಲಾಖೆ, ಜಿಲ್ಲಾ ಶಿಕ್ಷಣ ಇಲಾಖೆ, ಹನೂರಿನ ರಾಜ್ಯ ಸರ್ಕಾರಿ ನೌಕರರ ತಂಡ, ಡಿಡಿಪಿಐ ಕಚೇರಿ ತಂಡ, ತಾಲೂಕು ಕೇಂದ್ರಗಳ ಇನ್ನಿತರ ಇಲಾಖೆಯ ಸರ್ಕಾರಿ ನೌಕರರ ತಂಡಗಳು ಸೇರಿ ಒಟ್ಟು 7 ತಂಡಗಳು ಭಾಗವಹಿಸಿದ್ದವು.

ಅಂತಿಮವಾಗಿ ಹನೂರಿನ ಸರ್ಕಾರಿ ನೌಕರರ ತಂಡ ಮತ್ತು ಚಾಮರಾಜನಗರದ ಡಿಡಿಪಿಐ ತಂಡದ ನಡುವೆ ನಡದ ಪೈನಲ್ ಪಂದ್ಯಾವಳಿಯಲ್ಲಿ ಹನೂರು ಪುಟ್‍ಬಾಲ್ ತಂಡ 5 –0 ಅಂತರದಲ್ಲಿ ಜಯ ಗಳಿಸಿತು. ಟೂರ್ನಿಯ ಎಲ್ಲಾ ಪಂದ್ಯದಲ್ಲಿ ಉತ್ತಮ ರೀತಿಯಲ್ಲಿ ಆಡಿ ತಂಡದ ಗೆಲುವಿಗೆ ಕಾರಣರಾದ ಆಶೋಕ, ಶ್ರೀನಿವಾಸ್‍ನಾಯ್ಡು, ಅಜಿತ್, ಮುತ್ತು, ಚಂದ್ರನ್, ಸಂತೋಷ್, ಮಹದೇವಪ್ರಸಾದ್ ಮತ್ತು ಇನ್ನಿತರ ಆಟಗಾರರನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅದ್ಯಕ್ಷರಾದ ರಾಚಪ್ಪ ಸನ್ಮಾನಿಸಿ ಅಭಿನಂದಿಸಿದರು 

ಹನೂರು ಹಂಟರ್ಸ್ ಕ್ರಿಕೆಟ್ ತಂಡ ಮತ್ತು ಪಟ್ಟಣದ ಸ್ಥಳೀಯರಿಂದ ಶುಭಾಶಯ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಹನೂರಿನ ಪುಟ್‍ಬಾಲ್‍ ತಂಡ  ಜಿಲ್ಲಾ ಮಟ್ಟದಲ್ಲಿ ಆಯ್ಕೆ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ರಾಜ್ಯ ಮಟ್ಟದಲ್ಲೂ ಸಹ ಉತ್ತಮ ಪ್ರದರ್ಶನ ನೀಡಿ, ನಮ್ಮ ಜಿಲ್ಲೆಗೆ ಮತ್ತು ನೂತನ ಹನೂರು ತಾಲೂಕಿಗೆ ಕೀರ್ತಿ ತರುವಂತಾಗಲಿ ಎಂದು ಹನೂರು ಹಂಟರ್ಸ್ ತಂಡದ ಆಟಗಾರರು ಮತ್ತು ಸ್ಥಳೀಯರು ಶುಭಾಶಯ ಕೋರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News