ತೆಲಂಗಾಣ ಅಸೋಸಿಯೇಷನ್ ಅಧ್ಯಕ್ಷರಾಗಿ ಸಂದೀಪ್ ಮಕ್ತಾಲ್
Update: 2018-02-03 23:02 IST
ಬೆಂಗಳೂರು, ಫೆ. 3: ಕರ್ನಾಟಕ ರಾಜ್ಯ ತೆಲಂಗಾಣ ಅಸೋಸಿಯೇಷನ್‌ನ ನೂತನ ಅಧ್ಯಕ್ಷರನ್ನಾಗಿ ಸಂದೀಪ್ ಕುಮಾರ್ ಮಕ್ತಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಸಮಿತಿ ಅಧ್ಯಕ್ಷೆ ಸಿ.ದಿವ್ಯ, ಸತತ ಎರಡನೆ ಬಾರಿಗೆ ಮುಂದಿನ 2021 ರವರೆಗೂ ಸಂದೀಪ್‌ಕುಮಾರ್ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.
ಸಂದೀಪ್ ಕುಮಾರ್ ಮಾತನಾಡಿ, ಅಸೋಸಿಯೇಷನ್ ಆರಂಭವಾದನಿಂದ ತೆಲಂಗಾಣ ಚಳವಳಿಯನ್ನು ಬೆಂಬಲಿಸುತ್ತಿದೆ. ಅಲ್ಲದೆ, ರಾಜ್ಯಾದ್ಯಂತ ತೆಲುಗು ಜನರ ಹಿತರಕ್ಷಣೆ ಕಾಪಾಡುವಲ್ಲಿ ಶ್ರಮಿಸುತ್ತಿದೆ. ಅದಕ್ಕಾಗಿ, ಹಲವು ಸ್ಥಳಗಳಲ್ಲಿ, ತೆಲಂಗಾಣ ಉತ್ಸವಗಳು, ಸಾಹಿತ್ಯ, ಸಂಸ್ಕೃತಿ ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.