ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ

Update: 2018-02-04 13:27 GMT

ಬೆಂಗಳೂರು, ಫೆ.4:ಕರ್ನಾಟಕದಲ್ಲಿ ಕಾಂಗ್ರೆಸ್  ಸರಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಹೆಚ್ಚು ದಿನ ದೂರವಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿಯೇ ತೀರುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದಲ್ಲೇ ಭಾಷಣ  ಆರಂಭಿಸಿದ ಮೋದಿ ನಾಡೇಗೌಡ ಕೆಂಪೇಗೌಡ, ಕಿತ್ತೂರು ಚೆನ್ನಮ್ಮ, ಬಸವೇಶ್ವರ ,ಸಂತ ಶಿಶುನಾಳ ಷರೀಪ್  ಅವರನ್ನು ಸ್ಮರಿಸಿ ಮಾತನಾಡಿದರು.

ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರಕಾರ ಜನರಿಗೆ ತಲುಪಿಲ್ಲ ಎಂದರು.

ಕರ್ನಾಟಕ  ರಾಜ್ಯದಲ್ಲಿ  ರೈಲು ಅಭಿವೃದ್ಧಿಗೆ  ನಮ್ಮ ಸರಕಾರ ಹೆಚ್ಚಿನ  ಒತ್ತು ನೀಡಿದೆ. ಹಿಂದಿನ ಯುಪಿಎ ಸರಕಾರದ ಅಧಿಕಾರದ ಅವಧಿಯಲ್ಲಿ ರಾಜ್ಯದ ರೈಲ್ವೇ  ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂದರು.

ಪ್ರಧಾನ ಮಂತ್ರಿ  ಫಸಲ್  ಭಿಮಾ ಯೋಜನೆ ಸೇರಿದಂತೆ ಕೃಷಿಕರಿಗಾಗಿ  ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ರೈತರು ಮಣ್ಣಿನಿಂದ ಚಿನ್ನ ಬೆಳೆಯುತ್ತಾರೆ. ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಸರಕಾರ  ದೊರಕಿಸಿಕೊಟ್ಟಿದೆ. 

ಕೃಷಿ ಸಂಬಂಧಿಸಿದ ಕಾರ್ಖಾನೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.ಟೊಮ್ಯಾಟೊ, ಅಲೂಗಡ್ಡೆ ಮತ್ತು ಈರುಳ್ಳಿ ಬೆಳೆಗೆ ಪ್ರಮುಖ  ಆದ್ಯತೆ ನೀಡಲಾಗಿದೆ. ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಮೋದಿ ಹೇಳಿದರು.

ಕರ್ನಾಟಕದಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಅಪರಾಧಿಗಳ ರಾಜ್ಯವಾಗಿ ಕರ್ನಾಟಕ ಮಾರ್ಪಟ್ಟಿದೆ.  ಕೊಲೆಗಡುಕರಿಗೆ ಇಲ್ಲಿ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ವಿಶ್ವಕಪ್ ಜಯಿಸಿದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತದ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಮೋದಿ ತಂಡದ ಗೆಲುವಿನಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್ ಶ್ರಮವಿದೆ ಎಂದರು.

ಹೊಸ ಮೆಡಿಕಲ್ ಕಾಲೇಜುಗಳಿಗೆ ಅನುದಾನ ಮೀಸಲಿರಿಸಲಾಗಿದೆ. ಕೇವಲ ಅಭಿವೃಧ್ದಿಯೇ ಸರಕಾರದ ಉದ್ದೇಶವಾಗಿದೆ. ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರಕಾರ ಅಭಿವೃಧ್ಧಿಗೆ ಬಳಿಸಿಕೊಂಡಿಲ್ಲ  ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News