×
Ad

ದಾವಣಗೆರೆ: ಜಾತ್ರೆಯಿಂದ ಮರಳುವ ವೇಳೆ ಟ್ರ್ಯಾಕ್ಟರ್ ಪಲ್ಟಿ; ಇಬ್ಬರು ಸ್ಥಳದಲ್ಲೇ ಮೃತ್ಯು

Update: 2018-02-04 22:02 IST

ದಾವಣಗೆರೆ,ಫೆ.04: ಮೈಲಾರ ಜಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ದಾವಣಗೆರೆ ಸಮೀಪದ ಶಾಮನೂರು ಬಳಿಯ ಎನ್‍ಎಚ್4 ಬಳಿ ಶನಿವಾರ ರಾತ್ರಿ ನಡೆದಿದೆ.

ದಾವಣಗೆರೆ ರಾಮನಗರ ನಿವಾಸಿಗಳಾದ ಮೀನಾಕ್ಷಿ (27) ಹನುಮಕ್ಕ (69) ಮೃತಪಟ್ಟ ಮಹಿಳೆಯರು. ಟ್ರ್ಯಾಕ್ಟರ್‍ನಲ್ಲಿ ಮೈಲಾರ ಜಾತ್ರೆ ಮುಗಿಸಿಕೊಂಡು ಹಿಂದಿರುಗಿ ಬರುತ್ತಿದ್ದ ವೇಳೆ ಟೈಯರ್ ಸಿಡಿದ ಪರಿಣಾಮ ಈ ಅವಘಡ ನಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News