×
Ad

ಮಡಿಕೇರಿ: ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2018-02-04 22:47 IST

ಮಡಿಕೇರಿ,  ಫೆ.4 : ಕಡಂಗದ ಮಲ್ಜಹುಲ್ ಇಖ್ವಾನ್ ಚಾರಿಟಿ ಗ್ರೂಪ್ ವತಿಯಿಂದ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ವಿರಾಜಪೇಟೆ ಸಮೀಪದ ಕಡಂಗ ಗ್ರಾಮದಲ್ಲಿ ಸಯ್ಯದ್ ಝೈನುಲ್ ಆಬಿದೀನ್ ಕೂರಿಕುಯಿ ತಂಗಳ್ ರವರ ನೇತೃತ್ವದಲ್ಲಿ  ನಡೆಯಿತು.

ಜಿಲ್ಲಾ ಉಪ ಖಾಝಿ ಮಹಮೂದ್ ಮುಸ್ಲಿಯಾರ್ ಎಡಪಲ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಶ್ರಫ್ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು. ಸಭೆಯಲ್ಲಿ ಕೊಡಗು ಸುನ್ನಿ ವೆಲ್‍ಫೇರ್ ಅಸೋಸಿಯೇಷನ್ ದುಬೈ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಹಾಜಿ, ರಾಜ್ಯ ಉಪಾಧ್ಯಕ್ಷರಾದ ಅಶ್ರಫ್ ಸೋಮವಾರಪೇಟೆ, ಮುಹಿಯುದ್ದೀನ್ ಹಾಜಿ, ಜಲೀಲ್ ಸಖಾಫಿ, ಎಂ.ಎ.ಅಬೂಬಕರ್, ಮಜೀದ್ ಸಅದಿ, ಅಬ್ದುಲ್ ರಹಮಾನ್ ಸಅದಿ, ಉಬೈದ್ ಗುಂಡಿಕರೆ ಮುಂತಾದವರು ಉಪಸ್ಥಿತರಿದ್ದರು. 

ಇದೇ ಸಂದರ್ಭ ಕಡಂಗ ನಿವಾಸಿಯಾದ ರಾಜು ಎಂಬುವವರಿಗೆ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು. ಶಾಖಾಧ್ಯಕ್ಷರಾದ ರಾಶಿದ್ ಕಡಂಗ ಸ್ವಾಗತಿಸಿ, ನಿಝಾರ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News