ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಚಾಲಕರ ಆಯ್ಕೆ
Update: 2018-02-04 22:50 IST
ಮಡಿಕೇರಿ, ಫೆ.4 : ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣದ ಕಾರ್ಯಾಗಾರದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಅಂಕಿತ್ ಪೊನ್ನಪ್ಪ ಹಾಗೂ ಮಡಿಕೇರಿ ಕ್ಷೇತ್ರದ ಸಂಚಾಲಕರಾಗಿ ಹಮೀದ್ ಖಾನ್ ಕಾಗಡಿಕಟ್ಟೆಯವರನ್ನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಬಸವವನೇಗೌಡ ಬಾದರ್ಲಿ ಆಯ್ಕೆ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣಗಳ ಸಂಚಾಲಕರಾದ ಪಿ.ಎಂ.ಶಾಫಿ ಕೊಟ್ಟಮುಡಿ ತಿಳಿಸಿದ್ದಾರೆ.