×
Ad

ಜೀವನ ಕೌಶಲ್ಯ ಯುವಜನರ ಬದುಕಿಗೆ ದಾರಿದೀಪ: ಡಾ.ರಾಮೇಗೌಡ

Update: 2018-02-04 23:03 IST

ಮಂಡ್ಯ, ಫೆ.4: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವಸ್ಪಂದನ ಕೇಂದ್ರ, ನಿಮ್ಹಾನ್ಸ್, ರಾಸೇಯೋ ಘಟಕಗಳು ಹಾಗೂ ಬಾಂಧವ್ಯ ಫೌಂಡೇಷನ್ ವತಿಯಿಂದ ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ರವಿವಾರ ಯುವ ಸ್ಪಂದನ ಅರಿವು ಮತ್ತು ಜೀವನ ಕೌಶಲ್ಯ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರಾಮೇಗೌಡ, ವಿದ್ಯಾರ್ಥಿ ಬದುಕಿನಲ್ಲಿ ಜೀವನ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಮುಂಬರುವ ಬದುಕಿನ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಬದುಕು ಕಟ್ಟಿಕೊಳ್ಳಬಹುದು ಎಂದರು.

ಜೀವನ ಕೌಶಲ್ಯಗಳ ಬದುಕನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮತ್ತು ಮಾರ್ಗದರ್ಶನ ನೀಡುತ್ತವೆ. ವೈಜ್ಞಾನಿಕ ಯುಗದಲ್ಲಿ ಮನುಷ್ಯ ಏನೇ ಸಾಧನೆ ಮಾಡುತ್ತಿದ್ದರೂ ಬದುಕು ಕಟ್ಟಲು ಸೆಣಸಾಡುತ್ತಿರುವ ಈ ಕಾಲಘಟ್ಟದಲ್ಲಿ ಜೀವನಕೌಶಲ್ಯ ಕಾರ್ಯಾಗಾರಗಳು ಮತ್ತು ತರಬೇತಿ ಶಿಬಿರಗಳು ಅವಶ್ಯಕ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಯುವಜನರ ಬದುಕಿಗೆ ಈ  ಕೌಶಲ್ಯಗಳು ದಾರಿದೀಪದಂತೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರವನ್ನು ಆಪ್ತಸಮಾಲೋಚಕರಾದ ಸಂದೀಪ್ ಬಿ.ಎಚ್. ಮತ್ತು ರಾಸೇಯೋ ಅಧಿಕಾರಿ ಡಾ.ಲಿಂಗರಾಜು ನಡೆಸಿಕೊಟ್ಟರು. ರಾಸೇಯೋ ಅಧಿಕಾರಿಗಳಾದ ಜಗದೀಶ್ ಮತ್ತು ನೇತ್ರಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News