×
Ad

ಮೈಸೂರು: ಸೂಕ್ತ ರೀತಿ ಸ್ಲಂ ಬೋರ್ಡ್ ಮನೆ ಹಂಚಿಕೆ; ಜಿಲ್ಲಾಧಿಕಾರಿ ಡಿ.ರಂದೀಪ್

Update: 2018-02-05 21:38 IST

ಮೈಸೂರು,ಫೆ.5: ಜಿಲ್ಲೆಯಲ್ಲಿ ನರ್ಮ್ ಯೋಜನೆಯಡಿ ಕರ್ನಾಟಕ ಸ್ಲಂ ಬೋರ್ಡ್ ವತಿಯಿಂದ 1040 ಮನೆಗಳನ್ನು ಫೆಸ್-3 ಯಲ್ಲಿ ಏಕಲವ್ಯ ನಗರದಲ್ಲಿ ನಿರ್ಮಿಸಲಾಗಿದೆ. ಮನೆಗಳನ್ನು ಸೂಕ್ತ ರೀತಿಯಲ್ಲಿ ದಾಖಲೆ ನೀಡಿರುವ ನಿರಾಶ್ರಿತರಿಗೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಏಕಲವ್ಯನಗರ ಹಾಗೂ ಸ್ಲಂ ಸಮಸ್ಯೆಗಳ ಕುರಿತ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು 350 ಮನೆಗಳನ್ನು ಈಗಾಲೇ ಹಂಚಿದ್ದು, ಅವರು ವಾಸವಿದ್ದಾರೆ ಎಂದರು.

686 ಮನೆಗಳನ್ನು ಆದ್ಯತೆಯ ಮೇಲೆ ಸೊನಿಯಾಗಾಂಧಿ ನಗರ, ನೆಲ್ಲೂರು ಕಾಲೋನಿಗಳಲ್ಲಿ ತಾತ್ಕಾಲಿಕ ಸೆಡ್‍ಗಳಲ್ಲಿ ವಾಸವಿರುವ ನಿವಾಸಿಗಳಿಂದ ಹಂಚಿಕೆ ಮಾಡಲು ಸ್ಲಂ ಬೋರ್ಡ್‍ನಿಂದ ಕೆಲವು ದಾಖಲಾತಿಗಳನ್ನು ಪಡೆಯಲಾಗಿದೆ. ಅದರಲ್ಲಿ 144 ಅರ್ಜಿದಾರರು ಸರಿಯಾದ ದಾಖಲಾತಿ ನೀಡಿರುವುದಿಲ್ಲ. ಸರಿಯಾದ ದಾಖಲಾತಿ ನೀಡುವಂತೆ ಅವರುಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು. ಏಕಲವ್ಯ ನಗರ ಅಥವಾ ಕೆಸರೆಯಲ್ಲಿ ನಿರ್ಮಿಸಿರುವ 252 ಮನೆಗಳಲ್ಲಿ ಸೊನಿಯಾಗಾಂಧಿ ನಗರ, ನೆಲ್ಲೂರು ಕಾಲೋನಿಗಳಲ್ಲಿ ತಾತ್ಕಾಲಿಕ ಸೆಡ್‍ಗಳಲ್ಲಿ ವಾಸವಿರುವ ನಿವಾಸಿಗಳಿಗೆ ಮನೆ ನೀಡಲಾಗುವುದು ಎಂದರು.

ಮೈಸೂರು ಶಾಮಿಲ್, ರಾಮಣ್ಣ ಸರ್ಕಲ್, ಮೇಧಾರ್ ಬ್ಲಾಕ್‍ಗಳಲ್ಲಿ ವಾಸಿಸುವ ಅರ್ಹ ಫಲಾನುಭವಿಗಳಿಗೆ ಅವರು ನೀಡಿರುವ ದಾಖಲೆ ಪರಿಶೀಲಿಸಿ ಏಕಲವ್ಯ ನಗರದಲ್ಲಿ ಮನೆ ಹಂಚಿಕೆ ಮಾಡಲು ಸೂಕ್ತ ಪಟ್ಟಿಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಸ್ಲಂ ಬೋರ್ಡ್ ಮುಖ್ಯ ಅಭಿಯಂತರ ಕಪಿನಿ ಗೌಡ, ಮೈಸೂರು ತಾಲೂಕು ತಹಸೀಲ್ದಾರ್ ರಮೇಶ್ ಬಾಬು, ನಿಖಿತ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News