ಕೋಲಾರ: ಎ.ಪಿ.ಜೆ.ಅಬ್ದುಲ್ ಕಲಾಂ ಸೈನ್ಸ್ ಗ್ಯಾಲಕ್ಸಿ ವಿಜ್ಞಾನ ವಸ್ತು ಪ್ರದರ್ಶನ

Update: 2018-02-05 17:13 GMT

ಕೋಲಾರ,ಫೆ.6: ಕೋಲಾರದ ರಹಮತ್ ನಗರದಲ್ಲಿರುವ ನ್ಯೂ ಜನರೇಶನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2017-18ನೇ ಸಾಲಿನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸೈನ್ಸ್ ಗ್ಯಾಲಕ್ಸಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯ ರಮೇಶ್‍ಬಾಬು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲೆಯ ಕಾರ್ಯದರ್ಶಿ ಜಮೀರ್ ಅಹಮದ್ ರವರ ಪರಿಶ್ರಮದಿಂದ ಶಾಲೆಯು ಉನ್ನತ ಸ್ಥಾನಕ್ಕೇರಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವುದಲ್ಲದೆ, ಮಕ್ಕಳಲ್ಲಿ ವಿಜ್ಞಾನದ ಕಲ್ಪನೆಗಳನ್ನು ಬೆಳೆಸಲು ಅನಕೂಲಕರವಾಗುತ್ತದೆ. ಇಲ್ಲಿನ ಮಾದರಿಗಳನ್ನು ನೋಡಿದಾಗ ಶಾಲೆಯಲ್ಲಿ ಉತ್ತಮ ಶಿಕ್ಷಕರಿರುವುದು ಅರಿವಿಗೆ ಬಂದಿದೆ. ಇಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಆಶಿಸಿದರು. 

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷ ಎ.ಸದಾನಂದ ಮಾತನಾಡಿ, ಉತ್ತಮ ಶಿಕ್ಷಕರಿಂದ ಕೂಡಿರುವ ಈ ಶಾಲೆಯು ಕೋಲಾರ ನಗರದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.

ಬಿ.ಆರ್.ಸಿ ಸಂಯೋಜಕ ಎ.ಬಿ.ರಾಮಕೃಷ್ಣಪ್ಪ ಮಕ್ಕಳ ಹಾಗೂ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಮಾದರಿಗಳನ್ನು ವೀಕ್ಷಿಸಿ ಪೋಷಕರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ವಿಜ್ಞಾನದ ಮಹತ್ವವವನ್ನು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ರಮೇಶ್‍ಬಾಬು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷ ಎ.ಸದಾನಂದ ರವರನ್ನು ನ್ಯೂ ಜನರೇಶನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿದರು.

ಶಾಲಾ ಕಾರ್ಯದರ್ಶಿ ಸೈಯದ್ ಜಮೀರ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ವಿ ರಾಮಚಂದ್ರಪ್ಪ, ಜಿಲ್ಲಾ ನೌಕರರ ಸಂಘದ ಖಜಾಂಚಿ ಚೌಡಪ್ಪ, ಉಪಾಧ್ಯಕ್ಷ ಮುನೇಗೌಡ, ಕಾಮ್ಸ್‍ನ ತಾಲೂಕು ಅಧ್ಯಕ್ಷ ವಿ.ನಾಗಭೂಷಣ್, ಶಾಲೆಯ ಆಡಳಿತ ಸದಸ್ಯರಾದ ಅಸ್ಲಾಂಖಾನ್, ಖಜಾಂಚಿ ಹಂಜಾ ತಂಗಾಲ್, ಜಬ್ರುಲ್ಲಾಖಾನ್, ಶಾಲೆಯ ಹಿತೈಷಿಗಳಾದ ಗಂಗಾಧರ್, ಚಂದ್ರಶೇಖರ್ ಎಲ್ಲಾ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶಾಂತಕುಮಾರಿ ಸ್ವಾಗತಿಸಿ, ಸಹ ಶಿಕ್ಷಕ ಶ್ರೀನಿವಾಸ್ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News