×
Ad

ಗುಂಡ್ಲುಪೇಟೆ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

Update: 2018-02-05 23:33 IST

ಗುಂಡ್ಲುಪೇಟೆ,ಫೆ.05: ತಾಲೂಕಿನ ಕಬ್ಬಳ್ಳಿ ದಡದಳ್ಳಿ ಮಾರ್ಗ ಮಧ್ಯೆ ಇರುವ ಪಾಳು ಬಿದ್ದಿರುವ ಜಮೀನಿನಲ್ಲಿ ಸುಮಾರು 22 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವು ಸಂಪೂರ್ಣ ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳದಲ್ಲಿ ಮೃತಪಟ್ಟ ವ್ಯಕ್ತಿಯ ಪಾದರಕ್ಷೆ ದೊರೆತಿದ್ದು, ರಕ್ತದ ಕಲೆ, ಕುಡಿದು ಬಿಸಾಡಿರುವ ಮಧ್ಯದ ಪೌಚ್ ಹಾಗೂ ಸಾಕ್ಷ್ಯ ನಾಶ ಮಾಡಲು ಬಟ್ಟೆಯನ್ನು ಸುಡಲು ಪ್ರಯತ್ನ ಪಟ್ಟಿರುವ ಕುರುಹು ಸಿಕ್ಕಿದೆ. ಶವವನ್ನು ಗುರುತು ಸಿಗದಿರಲಿ ಎಂದು ಸೀಮೆ ಎಣ್ಣೆ ಹಾಕಿ ಸುಡಲಾಗಿದೆ ಎಂದು ತಿಳಿದು ಬಂದಿದೆ. 

ಘಟನಾ ಸ್ಥಳದ ಸಮೀಪದಲ್ಲಿಯೆ ಸೋಲಾರ್ ಪ್ಲಾಂಟ್ ಘಟಕ ನಡೆಯುತ್ತಿದ್ದು, ಘಟಕದ ಸಿಬ್ಬಂದಿಗಳ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಅಡಿಷನಲ್ ಎಸ್.ಪಿ. ಗೀತಾಪ್ರಸನ್ನ, ಡಿವೈಎಸ್ಪಿ ಜಯಕುಮಾರ್, ತೆರಕಣಾಂಬಿ ಪಿ.ಎಸ್.ಐ. ರವಿಕಿರಣ್ ಭೇಟಿ ನೀಡಿ ಪರಿಶೀಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News