ಹೂಗಳಿಂದ ಕಂಗೊಳಿಸುತ್ತಿದೆ ಮೊಗಲ್ ಗಾರ್ಡನ್...

Update: 2018-02-05 18:24 GMT

ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಎಲ್ಲೆಡೆಯೂ ಗಿಡಮರಗಳು ಹೂಗಳಿಂದ ಕಂಗೊಳಿಸುತ್ತಿದ್ದು ರಾಷ್ಟ್ರಪತಿ ಭವನದ ಮೊಗಲ್ ಗಾರ್ಡನ್‌ನಲ್ಲಿ 10,000 ಟುಲಿಪ್ ಹೂಗಳು ಮತ್ತು 130 ವಿಧಗಳ ಗುಲಾಬಿ ಹೂಗಳು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಸೋಮವಾರ ಮೊಗಲ್ ಗಾರ್ಡನ್‌ನಲ್ಲಿ ವಿಹರಿಸಿದರು. ಮಂಗಳವಾರದಿಂದ ಈ ಉದ್ಯಾನವನ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor