ಹೋಂ ಸ್ಟೇಗಳಲ್ಲಿ ಮದ್ಯ ಪೂರೈಕೆ: ದಂಡ ಹೆಚ್ಚಳಕ್ಕೆ ಕ್ರಮ; ಅಬಕಾರಿ ಸಚಿವ ತಿಮ್ಮಾಪೂರ

Update: 2018-02-06 18:15 GMT

ಬೆಂಗಳೂರು, ಫೆ. 6: ‘ಹೋಂ ಸ್ಟೇ’ಗಳಲ್ಲಿ ಮದ್ಯ ಪೂರೈಕೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ. ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಒತ್ತಡದ ಜೀವನದಿಂದ ನೆಮ್ಮದಿಯನ್ನು ಅರಸಿ ‘ಹೋಂ ಸ್ಟೇ’ಗೆ ತೆರಳುತ್ತಾರೆ. ಆದರೆ, ಹೋಂ ಸ್ಟೇಗಳಲ್ಲಿ ಕೆಲವರು ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದಾರೆಂಬುದು ಸರಕಾರದ ಗಮನಕ್ಕೆ ಬಂದಿದೆ ಎಂದರು.

ರಾಜ್ಯದ ಯಾವುದೇ ಹೋಂ ಸ್ಟೇಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ. ಬೆಂ.ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೋಂ ಸ್ಟೇನಲ್ಲಿ ಮದ್ಯ ಸರಬರಾಜು ಮಾಡಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ 5 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ವಿಶ್ರಾಂತಿಗಾಗಿ ಹೋಂ ಸ್ಟೇ ಗಳಿಗೆ ತೆರಳಿದರೆ ಅಲ್ಲಿ ಕುಡುಕರ ಹಾವಳಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಈಗಾಗಿ ಹೋಂ ಸ್ಟೇಗಳಲ್ಲಿ ಮದ್ಯ ಪೂರೈಕೆ ಮತ್ತು ಸೇವನೆಗೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News