"ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ ಪೂರ್ತಿ ಕಾಶ್ಮೀರ ನಮ್ಮದಾಗುತ್ತಿತ್ತು"

Update: 2018-02-07 08:00 GMT

 ಹೊಸದಿಲ್ಲಿ, ಫೆ.7: ‘‘ಪ್ರಜಾಪ್ರಭುತ್ವಕ್ಕೆ ಜವಾಹರ್ ಲಾಲ್ ನೆಹರೂ ಕೊಡುಗೆ ವಿಚಾರ ಅಚ್ಚರಿ ಹುಟ್ಟಿಸುತ್ತದೆ. ಕಾಂಗ್ರೆಸಿಗರು ಒಂದೇ ಕುಟುಂಬದ ಪೂಜೆಯಲ್ಲಿ ಕಾಲ ಕಳೆದರು. 1947ರಲ್ಲಿ ಕಾಂಗ್ರೆಸ್ ದೇಶವನ್ನು ವಿಭಜಿಸಿದೆ. ಒಂದು ವೇಳೆ ನೆಹರೂ ಬದಲು ಸರ್ದಾರ್ ಪಟೇಲ್ ದೇಶದ ಮೊದಲ ಪ್ರಧಾನಿಯಾಗಿರುತ್ತಿದ್ದರೆ ಪೂರ್ತಿ ಕಾಶ್ಮೀರ ನಮ್ಮದಾಗುತ್ತಿತ್ತು. ಪಟೇಲ್‌ಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘‘ರಾಜೀವ್‌ಗಾಂಧಿ ಹೈದರಾಬಾದ್‌ಗೆ ತೆರಳಿದ್ದಾಗ ಕಾಂಗ್ರೆಸ್‌ನ ಹಿರಿಯ ಮುಖಂಡ ಟಿ. ಆಂಜನೇಯರನ್ನು ಹಿಂದುಳಿತ ನಾಯಕನೆಂಬ ಕಾರಣಕ್ಕೆ ಅವಮಾನಿಸಿದ್ದರು. ಎನ್‌ಟಿ ರಾಮರಾವ್ ಟಿಡಿಪಿ ಪಕ್ಷ ಕಟ್ಟಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘‘ಬೀದರ್-ಕಲಬುರಗಿ ರೈಲ್ವೇ ಯೋಜನೆಗೆ ಮಾಜಿ ಪ್ರಧಾನಿ ವಾಜಪೇಯಿ ಅವಧಿಯಲ್ಲಿ 2004ರಲ್ಲಿ ಶಂಕುಸ್ಥಾಪನೆಯಾಗಿತ್ತು. 2004ರಿಂದ 2013ರ ತನಕ ಏನೂ ಕಾಮಗಾರಿ ನಡೆಯಲಿಲ್ಲ್ಲ. ಬಳಿಕ ನೀವು ರೈಲ್ವೇ ಸಚಿವರಾಗಿದ್ದಾಗ 110 ಕಿ.ಮೀ.ನಲ್ಲಿ 37 ಕಿ.ಮೀ. ಕಾಮಗಾರಿ ಮುಗಿದಿತ್ತು. ಯಡಿಯೂರಪ್ಪ ಮನವಿ ಮೇರೆಗೆ ನಾವು ಆ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಕರ್ನಾಟಕ ರೈಲ್ವೇ ಬಗ್ಗೆ ಹೇಳಿದರೆ ಖರ್ಗೆ ಎದೆ ಉಬ್ಬಿಸುತ್ತಾರೆ’’ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಪ್ರಧಾನಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News