ಮಂಡ್ಯ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೂಲಿಕಾರರ ಧರಣಿ

Update: 2018-02-08 17:10 GMT

ಮಂಡ್ಯ, ಫೆ.8: ನಿವೇಶನ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಧರಣಿ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಮೆರವಣಿಗೆಯಲ್ಲಿ ತೆರಳಿದ ಅವರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದರು.

ಉದ್ಯೋಗ ಖಾತ್ರಿ ಕೆಲಸದಲ್ಲಿ 200 ದಿನದ ಕೆಲಸ ನೀಡಬೇಕು. ರೇಷನ್ ಕಾರ್ಡ್ ಗೊಂದಲ ನಿವಾರಿಸಬೇಕು. ಸ್ಮಶಾನಕ್ಕೆ ಸ್ಥಳಾವಕಾಶ ಕಲ್ಪಿಸಬೇಕು. ಸರಕಾರಿ ಭೂಮಿಯಲ್ಲಿ ವಾಸುತ್ತಿರುವವ ಬಡವರಿಗೆ ಹಕ್ಕುಪತ್ರ, ಕುಡಿಯುವ ನೀರು, ವಿದ್ಯುತ್, ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಜೆಟ್‍ನಲ್ಲಿ ಕೂಲಿಕಾರರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಮತ್ತು ಬಜೆಟ್ ಪೂರ್ವಭಾವಿ ಸಭೆ ತಮ್ಮನ್ನು ಆಮಂತ್ರಿಸಬೇಕು. ಸಂಧ್ಯಾ ಸುರಕ್ಷಾ, ವಿಧವಾ ವೇತನವನ್ನು 1,500ಕ್ಕೇರಿಸಿ ಸಮರ್ಪಕವಾಗಿ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ, ಅಬ್ದುಲ್ಲಾ, ಸರೋಜಮ್ಮ, ಬಿ.ಎಂ.ಶಿವಮಲ್ಲು, ರೋಣಿತ, ಶಂಕ್ರಪ್ಪ, ಡಿ.ಸಿ.ಉಮೇಶ್, ಎನ್.ಸುರೇಂದ್ರ, ಶಾಂತಮ್ಮ, ಗಿರೀಶ್, ಗೋವಿಂದ, ಕೆ.ಬಸವರಾಜು, ಹನುಮೇಗೌಡ, ಬಸವಣ್ಣ, ಪ್ರದೀಪ್‍ಕುಮಾರ್, ಮಧುಕುಮಾರ್, ಹೊಟ್ಟೆಮಾರಯ್ಯ, ಶುಭಾವತಿ, ಮರಿಶೆಟ್ಟಿ, ಶಿವಕುಮಾರ್, ಪ್ರಕಾಶ್, ಹನುಮಂತು ಹಾಗೂ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News