ಮದ್ದೂರು: ತೋಟಗಾರಿಕೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಒತ್ತಾಯ
ಮದ್ದೂರು,ಫೆ.09: ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲೇ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಯುವ ಒಕ್ಕಲಿಗರ ಸಂಘ ಮತ್ತು ಛಲವಾದಿ ಮಹಾಸಭಾ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಪುರಸಭಾಧಿಕಾರಿಗಳು ಸರಕಾರದ ಮಾನದಂಡದ ಅನುಸಾರ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕ್ಯಾಂಟೀನ್ ತೆರೆಯಲು ಮುಂದಾಗಿದ್ದು, ಇದಕ್ಕೆ ತಮ್ಮ ಬೆಂಬಲವಿದೆ ಎಂದು ಅವರು ತಾಲೂಕು ಕಚೇರಿ ಶಿರಸ್ತೇದಾರ್ ಅವರಿಗೆ ಮನವಿ ಸಲ್ಲಿಸಿದರು.
ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸಂಘಟನಾ ಕಾರ್ಯದರ್ಶಿ ಪಿಯಾಂಕ ಅಪ್ಪುಗೌಡ ಮಾತನಾಡಿ, ಬಹುತೇಕ ಎಲ್ಲಾ ಸರಕಾರಿ ಕಚೇರಿ, ಬಸ್‍ನಿಲ್ದಾಣ, ಇತರ ಸಾರ್ವಜನಿಕ ಸ್ಥಳಗಳು ಸಮೀಪದಲ್ಲಿರುವುದರಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕ್ಯಾಂಟೀನ್ ಸೂಕ್ತ ಎಂದರು.
ಕರ್ನಾಟಕ ರಾಜ್ಯ ಯುವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹರೀಶ್, ಸದಸ್ಯರಾದ ಕೃಷ್ಣ, ಸಿದ್ದಪ್ಪ, ರೇವಂತ್, ಚೇತನ್, ಮರಲಿಂಗ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಎ.ಅಂಬರೀಶ್, ಪ್ರ.ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಶಿವಕುಮಾರ್, ಕೃಷ್ಣಮೂರ್ತಿ, ಕಬ್ಬಾಳಯ್ಯ, ವರುಣ್, ಮರಳಿಗ ಶಿವರಾಜು, ಮರಂಕಯ್ಯ, ಇತರರಿದ್ದರು.