×
Ad

ಸೊರಬ : ನಿಸರಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅನಿತಾ ಚಂದ್ರಪ್ಪ ಆಯ್ಕೆ

Update: 2018-02-10 23:28 IST

ಸೊರಬ,ಫೆ.10: ತಾಲ್ಲೂಕಿನ ನಿಸರಾಣಿ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅನಿತಾ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 10ಜನರ ಸದಸ್ಯರ ಸಂಖ್ಯೆಯಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅನಿತಾ ಚಂದ್ರಪ್ಪ ಒಬ್ಬರೆ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣಾಧಿಕಾರಿ ಎಚ್.ಕೆ.ಪರಶುರಾಮಪ್ಪ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ಅನಿತಾ ಚಂದ್ರಪ್ಪ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಸಲಹೆ ಪಡೆದು ಪಂಚಾಯತ್ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ಕಾರದ ಸವಲತ್ತುಗಳನ್ನು ಜನರಿಗೆ ಪ್ರಾಮಾಣಿಕವಾಗಿ ಒದಗಿಸಲಾಗುವುದು ಎಂದರು.
ಸದಸ್ಯರಾದ ನಾರಾಯಣಪ್ಪ, ಹುಚ್ಚಪ್ಪ ಕೆ.ಎಸ್.ಗೋಪಾಲ ಬಿ.ಎಲ್. ಶಿವಕುಮಾರ್, ರಾಮಪ್ಪ, ಲಕ್ಷ್ಮೀ ಬಂಗಾರಪ್ಪ, ಶರಾವತಿ ರಮೇಶ್, ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ನಾರಾಯಣಪ್ಪ, ಎಚ್.ಗಣಪತಿ, ಕೆ.ವಿ.ಗೌಡ್ರು,ಭಾಸ್ಕರ್ ಬರಗಿ, ಬಸಪ್ಪ ಚಿಲನೂರು, ಚಂದ್ರಪ್ಪ ಹಾಜರಿದ್ದರು.

ಫೆÇೀಟೊಸೊರಬ10-1 ತಾಲ್ಲೂಕಿನ ನಿಸರಾಣಿ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಶುಕ್ರವಾರ ಅಧ್ಯಕ್ಷರಾಗಿ ಅನಿತಾ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News