ಉಗ್ರರ ದಾಳಿ: ಯೋಧರಿಬ್ಬರು ಹುತಾತ್ಮ ...

Update: 2018-02-10 18:22 GMT

ಜಮ್ಮುವಿನ ಸಂಜುವಾನ್‌ನ ಸೇನಾ ಶಿಬಿರದ ಮೇಲೆ ಶನಿವಾರ ಮುಂಜಾನೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮುಂಜಾನೆ 4:55ರ ಹೊತ್ತಿಗೆ ಜೈಶೆ ಮುಹಮ್ಮದ್ ಉಗ್ರರು ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಜೂನಿಯರ್ ಕಮಿಶನ್ಡ್ ಆಫಿಸರ್ (ಜೆಸಿಒ) ಎಂ. ಅಶ್ರಫ್ ಮಿರ್ ಹಾಗೂ ನಾನ್-ಕಮಿಶನ್ಡ್ ಆಫೀಸರ್ (ಎನ್‌ಸಿಒ) ಹೋನಿ ಲೆ. ಮದನ್ ಲಾಲ್ ಚೌಧರಿ ಹುತಾತ್ಮರಾಗಿದ್ದಾರೆ. ಇವರಿಬ್ಬರೂ ಜಮ್ಮುಕಾಶ್ಮೀರ ಮೂಲದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor