ಮೋದಿಗೆ ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಪ್ ಫೆಲೆಸ್ತೀನ್’ ಗೌರವ
Update: 2018-02-10 23:58 IST
ಮೂರು ದೇಶಗಳ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಫೆಲೆಸ್ತೀನ್‌ನ ರಮಲ್ಲಾಗೆ ಆಗಮಿಸಿದರು. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ಪ್ರಕ್ರಿಯೆಯಲ್ಲಿ ಮೋದಿ ವಹಿಸಿದ ಪಾತ್ರವನ್ನು ಗೌರವಿಸುವ ಸಲುವಾಗಿ ಅವರಿಗೆ ಅಧ್ಯಕ್ಷ ಮಹಮೂದ್ ಅಬ್ಬಾಸ್ ‘ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಪ್ ಫೆಲೆಸ್ತೀನ್’ ಗೌರವ ಪ್ರದಾನ ಮಾಡಿದರು. ಮೋದಿ ಫೆಲೆಸ್ತೀನ್‌ಗೆ ಭೇಟಿ ನೀಡಿರುವ ಪ್ರಪ್ರಥಮ ಭಾರತೀಯ ಪ್ರಧಾನಿಯಾಗಿದ್ದಾರೆ.