ಕುಷ್ಟಗಿಯಲ್ಲಿ ರಾಹುಲ್ ವಿರುದ್ಧ ಮಾದಿಗ ಸಮುದಾಯದ ಪ್ರತಿಭಟನೆ
Update: 2018-02-11 13:07 IST
ಕುಷ್ಟಗಿ, ಫೆ.11: ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕುಷ್ಟಗಿಯಲ್ಲಿ ಮಾದಿಗ ಸಮುದಾಯದ ಜನರಿಂದ ಪ್ರತಿಭಟನೆ ಎದುರಾಯಿತು.
ರಾಹುಲ್ ಗಾಂಧಿ ಅವರು ವಾಹನ ಬರುತ್ತಿದ್ದಂತೆ ಓಡಿ ಬಂದ ಮಾದಿಗ ಸಮುದಾಯದ ಮುಖಂಡರು ನ್ಯಾ.ಸದಾಶಿವ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು. ಬಳಿಕ ರಾಹುಲ್ ಗಾಂಧಿ ಅವರು ಭಾಷಣ ಮಾಡುತ್ತಿದ್ದ ವೇದಿಕೆಯತ್ತ ನುಗ್ಗಿದ ಮಾದಿಗ ಸಮುದಾಯದ ಜನರನ್ನು ಪೊಲೀಸರು ತಡೆದರು.
ರಾಹುಲ್ ಗಾಂಧಿ ಕೇವಲ 5 ನಿಮಿಷದಲ್ಲಿ ಭಾಷಣ ಮುಗಿಸಿ ವೇದಿಕೆಯಿಂದ ತೆರಳಿದರು.