ಹೈಟೆಕ್ ಸ್ಲಂನಲ್ಲಿ ಜಗದೀಶ್ ಶೆಟ್ಟರ್ ವಾಸ!
ಹುಬ್ಬಳ್ಳಿ, ಫೆ.11: ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯ ಹೈಟೆಕ್ ಸ್ಲಂನಲ್ಲಿ ವಾಸವಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಸ್ಲಂನಲ್ಲಿ ನೆಲೆಸಿರುವ ಜನರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಕೈಗೊಂಡಿರುವ ಸ್ಲಂ ವಾಸ್ತವ್ಯ ಯೋಜನೆಯ ಬಗ್ಗೆ ಎಲ್ಲಡೆ ಟೀಕೆ ವ್ಯಕ್ತವಾಗಿರುವಾಗಲೇ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ಹೈಟೆಕ್ ಸ್ಲಂ ಎನಿಸಿಕೊಂಡಿರುವ ಚಾಮುಂಡೇಶ್ವರಿ ಸ್ಲಮ್ ನಲ್ಲಿ ವಾಸ್ತವ ಹೂಡಿರುವುದು ವಿವಾದಕ್ಕೆ ಕಾರಣವಾಗಿದೆ.
24 ಗಂಟೆ ಕಾಲ ನೀರು ಸೌಲಭ್ಯ, ವಿದ್ಯುತ್ , ರಸ್ತೆ ಸಂಪರ್ಕ , ಸಮರ್ಪಕ ಒಳಚರಂಡಿ ವ್ಯವಸ್ಥೆ ಇರುವ ಚಾಮುಂಡೇಶ್ವರಿ ಸ್ಲಂನಲ್ಲಿರುವ ಮನೆಯೊಂದರಲ್ಲಿ ಜಗದೀಶ್ ಶೆಟ್ಟರಿಗೆ ವ್ಯಾಸ್ತವ್ಯ ಹೂಡಿದ್ದರು. ಹುಬ್ಬಳ್ಳಿಯಲ್ಲಿ ಸಮಸ್ಯೆಗಳಿರುವ ಹಲವು ಸ್ಲಮ್ ಗಳಿದ್ದರೂ, ಶೆಟ್ಟರು ಅವರು ಯಾವುದೇ ಸಮಸ್ಯೆ ಇಲ್ಲದ ಹೈಟೆಕ್ ಸ್ಲಮ್ ನಲ್ಲಿ ವಾಸವಾಗಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಬಿಜೆಪಿಗೆ ಸೇರಿದ ಕಾರ್ಯಕರ್ತರೊಬ್ಬರು ತನ್ನ ಮನೆಯಲ್ಲಿಯೇ ಜಗದೀಶ್ ಶೆಟ್ಟರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು ಎಂದು ತಿಳಿದು ಬಂದಿದೆ.