×
Ad

ಮಹಾಶಿವರಾತ್ರಿ ; ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿರುವ ಜನಸಾಗರ

Update: 2018-02-11 15:57 IST

ಹನೂರು,ಫೆ.11 : ಮಹಾಶಿವರಾತ್ರಿ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರಸಿದ್ದಿಯಾದ ಪುಣ್ಯ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಕನಕಪುರದ ಬಸವನಕಡದ ಕಾವೇರಿ ನದಿಯನ್ನು ದಾಟಿ ಕಾಲ್ನಡಿಗೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಶಿವರಾತ್ರಿಯ ಹಿನ್ನಲೆ ಮಲೈಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತಸಾಗರ ಶಿವನ ನಾಮಸ್ಮರಣೆಯ ಜೊತೆಗೆ ತಮ್ಮ ಕಷ್ಟಗಳ ನಿವಾರಣೆ ಮತ್ತು ಬೇಡಿಕೆ ಈಡೇರಿಕೆಗಾಗಿ ಜಾಗರಣೆ ಮಾಡುವ ಸಲುವಾಗಿ ಪಾದಯಾತ್ರೆಯ ಮುಖಾಂತರ ರಾಮನಗರ , ಚನ್ನಪಟ್ಟಣ , ಹಾರುವಹಳ್ಳಿ ,ಬಿಡದಿ , ಬೆಂಗಳೂರು ಗ್ರಾಮಾಂತರ , ತುಮಕೂರು , ಚಿಕ್ಕನಾಯಕನಹಳ್ಳಿ , ವಿವಿಧ ಭಾಗಗಳಿಂದ ಬಂದು ಕನಕಪುರ ಜಿಲ್ಲೆಯ ಏಳುಗಳ್ಳಿ ಎಂಬ ಗ್ರಾಮದಲ್ಲಿ ಬಂದು ವಾಸ್ತವ್ಯ ಹೂಡಿ ಅನಂತರ ಬಸವನಕಡದ ಕಾವೇರಿ ನದಿಯನ್ನು ದಾಟಿ ಕಾವೇರಿ ವನ್ಯಜೀವಿಧಾಮ ಹನೂರು ವಲಯದ ಕಡೆ ನಡೆದು ಬಂದ ಭಕ್ತರಿಗೆ ಹನೂರು ತಾಲ್ಲೂಕಿನ ಶಾಗ್ಯ ಗ್ರಾಮಸ್ಥರು ಕಾಡಿನ ಒಳಗಡೆ ಪ್ರತಿ ಕಿ.ಲೋ ಮೀಟರ್‍ಗೂ ಕುಡಿಯುವ ನೀರು, ಊಟ, ಉಪಚಾರ, ವಿರಾಮ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ.

ಪಾದಯಾತ್ರೆಗಳಿಗೆ  ಊಟ ,ಮಜ್ಜಿಗೆ ,ಹಣ್ಣು ,ಕುಡಿಯಲು ನೀರಿನ ವ್ಯವಸ್ಥೆ : ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶಾಗ್ಯ, ಹನೂರು, ಕೌದಳ್ಳಿ ತಾಳಬೆಟ್ಟ ,ಡಕೆಹಳ್ಳ ,ತಾಳಬೆಟ್ಟ , ಇನ್ನಿತರ ಭಾಗಗಳಲ್ಲಿ ಸ್ಥಳೀಯರು ಮತ್ತು ರಾಜ್ಯದ ನಾನಾ ಭಾಗಗಳ ಕಾಲ್ನಾಡಿಗೆಯ ಮುಖಾಂತರ ಆಗಮಿಸುವ ಯಾತ್ರಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕನಕಪುರ ಜಿಲ್ಲೆಯಿಂದ ನಾನು 10 ವರ್ಷಗಳಿಂದ ಕಾಲ್ನಡಿಗೆಯಲ್ಲಿ  ಕಾವೇರಿ ನದಿಯನ್ನು ದಾಟಿ ಮಲೈಮಹದೇಶ್ವರ ಬೆಟ್ಟಕ್ಕೆ ಯಾತ್ರೆಗೆ ಹೋಗುತ್ತಿದ್ದೇನೆ. ನದಿಯನ್ನು ದಾಟಿ ಹೋಗುವುದರಿಂದ  ಕನಕಪರದಿಂದ ಹನೂರು ತಾಲೂಕಿಗೆ ಬೇರೆ ಹೆದ್ದಾರಿಗಳನ್ನು ಹೋಲಿಸಿದರೆ ನೂರಾರು ಕಿ.ಮೀ ಹತ್ತಿರವಾಗುತ್ತದೆ.

ಹಲವು ವರ್ಷಗಳಿಂದ ರಾಜ್ಯ ಸರ್ಕಾರಗಳು ಇಲ್ಲಿ ಸೇತುವೆ ನಿರ್ಮಾಣ ಮಾಡಿ ಈ ರಸ್ತೆಯನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿ ಹುಸಿ ಭರವಸೆಗಳನ್ನೂ ನೀಡುತ್ತಿದ್ದೇ ಹೊರತು ಇಲ್ಲಿ ಸೇತುವೆ ಮತ್ತು ರಸ್ತೆ ಅಭಿವೃದ್ದಿಗೆ ಮುಂದಾಗಿಲ್ಲ

- ಜವರೇಗೌಡ ಕನಕಪರ ನಿವಾಸಿ

Full View

Writer - ವರದಿ : ಅಭಿಲಾಷ್ .ಟಿ

contributor

Editor - ವರದಿ : ಅಭಿಲಾಷ್ .ಟಿ

contributor

Similar News