×
Ad

ಸ್ಪಷ್ಟ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ : ಲಕ್ಷ್ಮಣ್‍ಕುಮಾರ್

Update: 2018-02-11 22:27 IST

ಮದ್ದೂರು, ಫೆ.11: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಲಕ್ಷ್ಮಣ್‍ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ನಡೆದ ಜನಪರ ಶಕ್ತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಅರಳುವುದು ಖಚಿತವಾಗಿದೆ. ಬಿಜೆಪಿ ಗೆದ್ದರೆ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ ತರುವ ಉದ್ದೇಶದಿಂದ ಸಲಹೆ, ಸಹಕಾರದ ಜತೆಗೆ, ಜನರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಪರಮಾನಂದ, ಜನಪರ ಶಕ್ತಿ ಸಂಚಾಕಲಕ ಕೆ.ಎಂ.ರಮೇಶ್, ತಾಲೂಕು ಜಾಲತಾಣದ ಸಂಚಾಲಕ ಶಶಿಧರ್, ಕಾರ್ಯದರ್ಶಿ ಎಂ.ಸಿ.ಸಿದ್ದು, ಚಾಮನಹಳ್ಳಿ ಜಿಪಂ ಶಕ್ತಿಕೇಂದ್ರದ ಮಹೇಂದ್ರ, ಮುಖಂಡರಾದ ಜಗನ್ನಾಥ್, ಟೈರ್ ಗಿರಿ, ಅರವಿಂದ್, ಗುರುಮಲ್ಲೇಶ್, ಮೂಗೂರೇಗೌಡ, ರಘು, ಶ್ರೀನಿವಾಸಶೆಟ್ಟಿ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News