ಮಡಿಕೇರಿ : ಸಕ್ಕರೆ ಖಾಯಿಲೆ, ಹೃದಯ ರೋಗದ ಕುರಿತು ವಿಚಾರ ಸಂಕಿರಣ
Update: 2018-02-11 22:41 IST
ಮಡಿಕೇರಿ,ಫೆ.11 :ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ “CARDIODIABETOLOGY” ಸಕ್ಕರೆ ಖಾಯಿಲೆ, ಹೃದಯ ರೋಗದ ಕುರಿತು ವಿಚಾರ ಸಂಕಿರಣ ನಡೆಯಿತು. ಕೊಡಗು ಹಿರಿಯ ವೈದ್ಯರಾದ ಡಾ.ದೇವಯ್ಯ ಸಂಸ್ಥೆಯ ನಿರ್ದೆಶಕರಾದ ಡಾ. ಮಹೇಂದ್ರ ಬಿ.ಜೆ, ಪ್ರಾಂಶುಪಾಲರಾದ ಕಾರ್ಯಪ್ಪ ಕೆ.ಬಿ, ವೈದ್ಯಕೀಯ ಅಧೀಕ್ಷಕರಾದ ಅಬ್ದುಲ್ ಅಝೀಝ್ , ಕೊಡಗು ಐಎಂಎ ಅಧ್ಯಕ್ಷರಾದ ಮೊಹನ್ ಅಪ್ಪಾಜಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇರಿ ನಾಣಯ್ಯ, ಸಹಪ್ರಾಧ್ಯಾಪಕರಾದ ಡಾ.ರಾಜೇಗೌಡ, ಡಾ. ಪ್ರಮೋದ್ ಡಾ. ಮಂಜುನಾಥ ಶೆಟ್ಟಿ, ಡಾ. ಅರುಣ್ ಎಸ್, ಡಾ.ದೀಪಕ್ ಮಡಿ, ಡಾ.ಪ್ರದೀಪ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಕ್ಕರೆ ಖಾಯಿಲೆ ಹೃದಯ ರೋಗ, ಕಿಡ್ನಿ ಸಮಸ್ಯೆ, ಎದೆನೋವು ಮತ್ತು ತುರ್ತು ಚಿಕಿತ್ಸಾ ಸಂಧರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಆಧುನಿಕ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಾಯಿತು. ಸುಮಾರು 140 ವೈದ್ಯರುಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.