×
Ad

ಸೊರಬ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸª

Update: 2018-02-11 22:44 IST

ಸೊರಬ,ಫೆ.11: ನಿಜವಾದ ಶಿಕ್ಷಣ ಮಾನವ ವ್ಯಕ್ತಿತ್ವದ ಅಭಿವೃದ್ಧಿಯೇ ಹೊರೆತು ವ್ಯಾಪಾರವಲ್ಲ ಎಂದು ತಾ.ಪಂ. ಅಧ್ಯಕ್ಷೆ ನಯನ ಶ್ರೀಪಾದ ಹೆಗಡೆ ತಿಳಿಸಿದರು.
ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂಬುದು ಮಾಹಿತಿ ಅಲ್ಲ, ಚಾರಿತ್ರಿಕ, ಮಾನಸಿಕ, ಮೌಲ್ಯಿಕ ಜೀವನ ಕಲ್ಪಿಸುವಂತಹದ್ದು. ಆಧುನಿಕತೆ ಹಾಗೂ ನಗರೀಕರಣದಿಂದ ನೈತಿಕ, ಕೌಟುಂಬಿಕ ಸಂಬಂಧಗಳು ಸಡಿಲಿಕೆಯಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಗಟ್ಟಿಗೊಳಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಾಲೆಗಳು ಸಾಮಾಜಿಕ ಹಾಗೂ ಸಂಸ್ಕಾರಯುತ ಜೀವನ ರೂಪಿಸಿಕೊಳ್ಳುವ ಕೇಂದ್ರಗಳಾಗಿವೆ. ಕೊಡಕಣಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆ ತೆರೆದು ಅಕ್ಷರ ಕಲಿಕೆಗೆ ಒತ್ತು ನೀಡಿದ್ದು ಮಹತ್ವದ್ದು ಎಂದರು.

ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಜಿ.ಪಂ ಸದಸ್ಯ ಸತೀಶ್ ಎಂ.ಅರ್ಜುನಪ್ಪ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೈ.ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು.

ಎಸ್.ಎಲ್.ಶಿವಪ್ಪ ಆಶಯ ನುಡಿ ನುಡಿದರು. ಶಿವಮೊಗ್ಗ ಅಬಕಾರಿ ಇಲಾಖೆ ಆಯುಕ್ತ ವೈ.ಆರ್.ಮೋಹನ್, ಕೊಡಕಣಿ ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಬಸಪ್ಪ, ಉಪಾಧ್ಯಕ್ಷ ಜಿ.ಹೆಚ್.ಕೃಷ್ಣಮೂರ್ತಿ, ಸದಸ್ಯರಾದ ಚಿನ್ನಪ್ಪ, ಹೂವಪ್ಪ ಗೂಳಿ, ಸದಾಶಿವಪ್ಪ,  ಭೂದೇವಮ್ಮ, ಶಾರದಾ ವೆಂಕಟೇಶ್, ಹೇಮಚಂದ್ರಪ್ಪ, ಜಾನಕಮ್ಮ, ಪಾರ್ವತಮ್ಮ, ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್, ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಹೆಚ್.ರಾಜಪ್ಪ, ಡಾ.ಲೋಕೇಶ್, ಸಿ.ಆರ್.ಪಿ ಎನ್.ಲಲಿತಾ, ಗಿರಿಜಮ್ಮ, ಸಂಧ್ಯಾ ಯುವರಾಜ್, ಸಂತೋಷ್, ನಿಂಗಪ್ಪ, ದ್ಯಾವಪ್ಪ, ಶೇಖರಪ್ಪ ಮಾಸ್ತರ್, ಗೋಪಾಲಪ್ಪ ರಾಯನ್, ಗಿರೀಶ್, ಶಿಕ್ಷಕರಾದ ಕೆ.ಮಂಜಪ್ಪ, ಮಲ್ಲೇಶಪ್ಪ, ಯಶೋಧ, ಉಷಾ, ರೋಹಿಣಿ, ಮಹಾಲಕ್ಷ್ಮೀ ಇತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News