ನೆಲ್ಯಹುದಿಕೇರಿಯಲ್ಲಿ ಎನ್‍ಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ: ಕೂರ್ಗ್ ಸ್ಟಾರ್ ತಂಡ ಚಾಂಪಿಯನ್

Update: 2018-02-12 14:03 GMT

ಮಡಿಕೇರಿ, ಫೆ.12:  ನಲ್ವತೆಕ್ರೆ ಪ್ರೀಮಿಯರ್ ಲೀಗ್ (ಎನ್‍ಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಟ್ರೈಟ್ ಫೋರ್ಸ್ ತಂಡವನ್ನು ಮಣಿಸುವ ಮೂಲಕ ಕೂರ್ಗ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ನಲ್ವತೆಕ್ರೆ ವ್ಯಾಪ್ತಿಯ 8 ತಂಡಗಳ ಪೈಕಿ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಟ್ರೈಟ್ ಫೋರ್ಸ್ ತಂಡ ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್‍ಗಳ ನಷ್ಟಕ್ಕೆ 37 ರನ್‍ಗಳನ್ನು ಗಳಿಸಿತು. 38 ರನ್‍ಗಳ ಗುರಿ ಬೆನ್ನಟ್ಟಿದ ಕೂರ್ಗ್ ಸ್ಟಾರ್ ತಂಡ 4.3 ಓವರ್‍ನಲ್ಲಿ 3 ವಿಕೆಟ್‍ಗಳ ನಷ್ಟಕ್ಕೆ ಗುರಿ ತಲುಪುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. 

ರಿಯಲ್ ಫೈಟರ್ಸ್ ತೃತೀಯ ಹಾಗೂ ಕೋಬ್ರಾಸ್ ನಾಲ್ಕನೇಯ ಸ್ಥಾನ ಪಡೆಯಿತು. ಫೈನಲ್ ಪಂದ್ಯ ಪುರುಷೋತ್ತಮ ಶರತ್, ಉತ್ತಮ ಬೌಲರ್ ಶಕೀರ್, ಉತ್ತಮ ಕ್ಯಾಚ್ ಕಿರಣ್, ಉತ್ತಮ ಬ್ಯಾಟ್ಸ್ ಮಾನ್ ಶರತ್, ಉತ್ತಮ ಆಲ್‍ರೌಂಡರ್ ಅಬು, ಸರಣಿ ಶ್ರೇಷ್ಠ ಸಂಜಯ್, ಬೆಸ್ಟ್ ಆಟಗಾರನಾಗಿ ಅಕ್ಬರ್ ಪ್ರಶಸ್ತಿ ಪಡೆದುಕೊಂಡರು. 

ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದೆ ಎಂದು ನೆಲ್ಯಹುದಿಕೇರಿ ಗ್ರಾ.ಪಂ ಪಿಡಿಓ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ನಲ್ವತೇಕ್ರೆಯ ಕುಂಬಳವೇಲಿ ಕುಟುಂಬಸ್ಥರ ಗದ್ದೆಯಲ್ಲಿ ಮೂರು ದಿನಗಳ ಕಾಲ ನಡೆದ ನಲ್ವೇತೆಕ್ರೆ ಪ್ರೀಮಿಯರ್ ಲೀಗ್ (ಎನ್‍ಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರತಿಭಾವಂತ ಹಲವು ಕ್ರೀಡಾಪಟುಗಳಿದ್ದು, ಸೂಕ್ತ ವೇದಿಕೆ ಹಾಗೂ ಸಾರ್ವಜನಿಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪೈಸಾರಿ ಜಾಗವನ್ನು ವಶಪಡಿಸಿಕೊಳ್ಳುವ ಮೂಲಕ ಮೈದಾನ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕೆಂದರು. 

ಗ್ರಾ.ಪಂ ಸದಸ್ಯರಾದ ಶಶಿ, ಅಫ್ಸಲ್, ಕೆಸಿಎಲ್ ಕ್ರೀಡಾಕೂಟದ ಕಾರ್ಯದರ್ಶಿ ಮುಸ್ತಫ ಸಿದ್ದಾಪುರ, ದಾನಿಗಳಾದ ಪ್ರಭನ್, ಕುಮಾರ್, ಐಎನ್‍ಟಿಯುಸಿ ನೆಲ್ಯಹುದಿಕೇರಿ ಅಧ್ಯಕ್ಷ ಮುಸ್ತಫ, ವಲಯ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಚಾಣಕ್ಯ ಸ್ರ್ಪೋಟ್ಸ್‍ನ ಮಾಲಿಕ ಸುರೇಶ್ ಬಿಳಿಗೇರಿ ಆಯೋಜಕರಾದ ಸಂಶೀರ್, ಯೂನುಸ್, ಮಿಥುನ್, ನಸೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News