×
Ad

ಮದ್ದೂರು: ಮನ್‍ಮುಲ್‍ನಲ್ಲಿ ಅತಿ ಹೆಚ್ಚು ಹಾಲು ಸಂಗ್ರಹ; ಕದಲೂರು ರಾಮಕೃಷ್ಣ

Update: 2018-02-12 23:46 IST

ಮದ್ದೂರು, ಫೆ.12: ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹ ಮಾಡುತ್ತಿರುವ ಒಕ್ಕೂಟ ಎಂಬ ಖ್ಯಾತಿಗೆ ಜಿಲ್ಲಾ ಹಾಲು ಒಕ್ಕೂಟ ಪಾತ್ರವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ಹರಕನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಒಕ್ಕೂಟಕ್ಕೆ ಪ್ರತಿನಿತ್ಯ 9 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ ಎಂದರು. ಪ್ರತಿ ತಿಂಗಳು 75 ಕೋಟಿ ರೂಪಾಯಿ ಹಣವನ್ನು ಹಾಲು ಉತ್ಪಾದಕರಿಗೆ ವಿತರಣೆ ಮಾಡುಲಾಗುತಿದೆ. ಜೊತೆಗೆ ಜಾನುವಾರುಗಳಿಗೆ ವಿಮೆ ಮಾಡಲು ಒಕ್ಕೂಟದಿಂದ 6 ಕೋಟಿ ರೂ. ನೀಡಲಾಗಿದೆ. ಪ್ರತಿಭಾನ್ವಿತ ಮಕ್ಕಳಿಗೆ ಪ್ರೊತ್ಸಾಹಧನ, ಹಾಲು ಕರೆಯುವ ಮೀಷನ್‍ಗೆ ಪ್ರೋತ್ಸಾಹಧನ ಸೇರಿದಂತೆ ಇನ್ನಿತರರ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಒಕ್ಕೂಟದ ನಿರ್ದೇಶಕ ಉಮೇಶ್, ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣಯ್ಯ, ವಿಸ್ತರಣಾಧಿಕಾರಿ ಹರೀಶ್‍ಹೆಗ್ಗಡೆ, ಹರಕನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಚಂದ್ರಪ್ಪ, ನಿರ್ದೇಶಕರಾದ ಪುಟ್ಟೇಗೌಡ, ದ್ವಾರಕೀ, ಕೃಷ್ಣಪ್ಪ, ಸುರೇಶ್‍ಹೆಗ್ಗಡೆ, ರಾಜಣ್ಣ, ಕಾರ್ಯನಿರ್ವಹಕಾ ಟಿ.ರಾಜಣ್ಣ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News