×
Ad

ಮಡಿಕೇರಿ: ಹತ್ಯೆ ಯತ್ನ ಆರೋಪ; ವ್ಯಕ್ತಿಯ ಬಂಧನ

Update: 2018-02-13 22:46 IST

ಮಡಿಕೇರಿ, ಫೆ.13: ನಾಪೋಕ್ಲು ಸಮೀಪದ ಎಡಪಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಎಡಪಾಲ ಗ್ರಾಮದ ನಿವಾಸಿ ಮಹಮದ್ ರಫೀಕ್ ಎಂಬವವರು ದೂರು ನೀಡಿದ್ದು, ಅದೇ ಗ್ರಾಮದ ಹನೀಫ್ ಎಂಬವರು ಗುಂಡು ಹಾರಿಸಿ ಹತ್ಯೆ ಯತ್ನ ನಡೆಸಿರುವುದಾಗಿ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ದೂರು ದಾಖಸಿದ್ದಾರೆ.

ನೂತನ ಮನೆ ಕಟ್ಟಿಸುವ ಸಲುವಾಗಿ ಜೀಪ್‍ನಲ್ಲಿ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ತನ್ನ ಹಾಗೂ ತನ್ನ ತಂದೆ ಹುಸೈನಾರ್ ಮೇಲೆ ಹನೀಫ್ ವಿನಾಕಾರಣ ವ್ಯಾನ್ ಒಳಗಿನಿಂದ ಗುಂಡು ಹಾರಿಸಿದ್ದಾರೆ ಎಂದು ಗ್ರಾಮದ ರಫೀಕ್ ಕೆ.ಯು ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಎಸ್.ಐ.ನಂಜುಂಡಸ್ವಾಮಿ ಆರೋಪಿ ಹನೀಫ್‍ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News